ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಹೀರೋಗಳ ಕಥೆ. ಅರೆ.. ಹೀರೋ ದರ್ಶನ್ ಅಲ್ಲವಾ ಅಂದ್ಕೋಬೇಡಿ. ಇಡೀ ಚಿತ್ರತಂಡ ಚಿತ್ರದ ಹೀರೋಗಳೆಂದು ಪರಿಗಣಿಸಿರೋದು ಚಿತ್ರಕ್ಕೆ ತೆರೆಯ ಹಿಂದೆ ದುಡಿದ ಕಾರ್ಮಿಕರನ್ನ.
ಮೇ 01ರ ಕಾರ್ಮಿಕ ದಿನಾಚರಣೆ ವಿಶೇಷವಾಗಿ ಚಿತ್ರದ ಮೇಕಿಂಗ್ ವಿಡಿಯೋ ಹೊರಬಿಟ್ಟಿರುವ ರಾಬರ್ಟ್ ಟೀಂ, ಚಿತ್ರದ ಕಾರ್ಮಿಕರನ್ನು ಹೀರೋಗಳ ಪಟ್ಟಕ್ಕೇರಿಸಿ ಧನ್ಯವಾದ ಅರ್ಪಿಸಿದೆ.
ನಮ್ಮ ಕನಸು ಸಾಕಾರಗೊಳಿಸುವ ನಿಜವಾದ ನಾಯಕರು ಬೆಳ್ಳಿ ಪರದೆ ಹಿಂದಿದ್ದಾರೆ. ರಾಬರ್ಟ್ ಟೀಂನಲ್ಲಿ ದುಡಿಯುತ್ತಿರುವ ತಾಂತ್ರಿಕ ವರ್ಗಕ್ಕೆ ಕಾರ್ಮಿಕ ದಿನಾಚರಣೆ ಶುಭಾಶಯಗಳು ಎಂದಿದೆ ರಾಬರ್ಟ್ ಟೀಂ.
ಉಮಾಪತಿ ನಿರ್ಮಾಣದ ಚಿತ್ರ ರಾಬರ್ಟ್. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ಇಷ್ಟು ಹೊತ್ತಿಗೆ ರಿಲೀಸ್ ಆಗಿ ಥಿಯೇಟರಿನಲ್ಲಿ ಹವಾ ಎಬ್ಬಿಸಬೇಕಿತ್ತು. ಲಾಕ್ ಡೌನ್ ಕಾರಣದಿಂದಾಗಿ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಲಾಕ್ ಡೌನ್ ಮುಗಿದು ಥಿಯೇಟರುಗಳು ಓಪನ್ ಆದ ತಕ್ಷಣ ಸಿನಿಮಾ ರಿಲೀಸ್ ಆಗಬಹುದು.