ಯಶ್ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರಂತೆ. ಆ ಚಿತ್ರಕ್ಕೆ ತಮನ್ನಾ ನಾಯಕಿಯಂತೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿಬಿಟ್ಟಿದೆ. ನಿರ್ಮಾಪಕರೂ ರೆಡಿ, ನಿರ್ದೇಶಕರು ರೆಡಿ ಎನ್ನುತ್ತಿದ್ದರಾದರೂ, ಯಾರವರು ಎಂಬುದು ಮಾತ್ರ ಪಕ್ಕಾ ಆಗುತ್ತಿಲ್ಲ. ಹಾಗೆ ಕೇಳಿಬಂದ ನಿರ್ದೇಶಕರ ಹೆಸರಲ್ಲಿ ಮಫ್ತಿ ನರ್ತನ್ ಹೆಸರೂ ಇದೆ. ಹೌದಾ ಎಂದಾಗ ನರ್ತನ್ ಹೇಳಿರೋದು ಇಷ್ಟು.
`ಯಶ್ ನನಗೆ ಅಣ್ಣನಿದ್ದಂತೆ. ಕಥೆ ಮಾಡಿಕೊಂಡು ಬಾ ಎಂದಿದ್ದಾರೆ. ಕೆಜಿಎಫ್ ನಂತರ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೀಗಾಗಿ ಜವಾಬ್ದಾರಿ ಹೆಚ್ಚು. ಅದಕ್ಕೆ ತಕ್ಕಂತೆ ಕಥೆ ಮಾಡುತ್ತಿದ್ದೇನೆ' ಎಂದಿದ್ದಾರೆ.
ಹಾಗಂತ ಅದು ಫೈನಲ್ ಅಲ್ಲ. ಏಕೆಂದರೆ ನರ್ತನ್ ಅವರ ಬಳಿ ಇನ್ನೂ ಕಥೆ ಕಂಪ್ಲೀಟ್ ಸಿದ್ಧವಾಗಿಲ್ಲ. ಆ ಕಥೆಯನ್ನು ಯಶ್‍ಗೆ ಹೇಳಿಯೂ ಇಲ್ಲ. ಹೀಗಾಗಿ ಈಗ ಹರಿದಾಡುತ್ತಿರುವ ಯಶ್ ಹೊಸ ಚಿತ್ರ, ತಮನ್ನಾ ನಾಯಕಿ ಎಂಬ ಸಿನಿಮಾದ ನಿರ್ದೇಶಕ ನರ್ತನ್ ಅವರಲ್ಲದೆಯೂ ಇರಬಹುದು. ಗಾಳಿಸುದ್ದಿಗಳಿಗೆಲ್ಲ ಗುದ್ದು ಕೊಟ್ಟು ಇದೇ ಕರೆಕ್ಟ್ ಎಂದು ಹೇಳಬೇಕಿರುವುದು ಯಶ್ ಮಾತ್ರ.