ಲಾಕ್ ಡೌನ್ ನಡುವೆ ಯಾವುದೇ ಸಿನಿಮಾ ಚಿತ್ರೀಕರಣ ನಡೆಯುತ್ತಿಲ್ಲ. ಶೂಟಿಂಗ್ ನಿಂತಿದೆ. ಥಿಯೇಟರುಗಳು ಬಂದ್ ಆಗಿವೆ. ಇದರ ನಡುವೆಯೇ ಶೋಕಿವಾಲ ಚಿತ್ರ ಡಬ್ಬಿಂಗ್ ಮುಗಿಸಿದೆ. ಲಾಕ್ ಡೌನ್ ನಡುವೆಯೇ ಸೋಷಿಯಲ್ ಡಿಸ್ಟೆನ್ಸ್ ಇಟ್ಟುಕೊಂಡು ಡಬ್ಬಿಂಗ್ ಮುಗಿಸಿದ್ದೇವೆ ಎಂದಿದೆ ಚಿತ್ರತಂಡ. ಯಾವುದೇ ರೀತಿಯ ಸಮಸ್ಯೆಗಳಿಗೆ ಅವಕಾಶವಿಲ್ಲದಂತೆ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನೂ ತೆಗೆದುಕೊಂಡೇ ಡಬ್ಬಿಂಗ್ ಪೂರೈಸಿದೆ.
ಜಾಕಿ ತಿಮ್ಮೇಗೌಡ ನಿರ್ದೇಶನದ ಶೋಕಿವಾಲ ಚಿತ್ರಕ್ಕೆ ಟಿ.ಆರ್.ಚಂದ್ರಶೇಖರ್ ನಿರ್ಮಾಪಕ. ಅಜೇಯ್ ರಾವ್ ಎದುರು ಈ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‍ಟೈನರ್ ಎಂದಿದ್ದಾರೆ ಟಿ.ಆರ್.ಚಂದ್ರಶೇಖರ್.