ಡಾ.ರಾಜ್ ಕುಟುಂಬದ 3ನೇ ತಲೆಮಾರಿನ ಇನ್ನೊಂದು ಕುಡಿ ಯುವ ರಾಜ್ ಕುಮಾರ್. ರಾಘವೇಂದ್ರ ರಾಜ್ಕುಮಾರ್ ಅವರ ಕಿರಿಯ ಮಗ. ಅವರ ಅಭಿನಯದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ಕೈಯ್ಯಲ್ಲಿ ಈಟಿ ಹಿಡಿದಿರುವ ಯುವರಾಜ್ ರಗಡ್ ಲುಕ್ನಲ್ಲಿದ್ದಾರೆ.
ಅಣ್ಣಾವ್ರ 92ನೇ ಹುಟ್ಟುಹಬ್ಬಕ್ಕಾಗಿಯೇ ವಿಶೇಷವಾಗಿ ಡಿಸೈನ್ ಮಾಡಿಸಿ ರಿಲೀಸ್ ಮಾಡಿರುವ ಪೋಸ್ಟರ್ ಇದು. ಪುನೀತ್ ರುದ್ರನಾಗ್ ನಿರ್ದೇಶಕ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರ ಗರಡಿಯ ಹುಡುಗ ಪುನೀತ್ ರುದ್ರನಾಗ್. ರವಿ ಬಸ್ರೂರು ಸಂಗೀತ ನಿರ್ದೇಶಕ. ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ಹುಡುಕಾಟದಲ್ಲಿದ್ದೇವೆ ಎಂದು ಪೋಸ್ಟರ್ನಲ್ಲಿಯೇ ಹೇಳಿದೆ ಚಿತ್ರತಂಡ