ನಿರ್ದೇಶಕ ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅವರ ಕ್ಯಾಮೆರಾ ಎದುರು ಇರುವುದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್. ನೂರಾರು ಪೊಲೀಸರು. ರೀಲ್ ಅಲ್ಲ, ರಿಯಲ್ ಪೊಲೀಸರು. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರುಗಳೆಲ್ಲ ಭಟ್ಟರ ಕ್ಯಾಮೆರಾದಲ್ಲಿ ಸೆರೆಯಾಗಲಿದ್ದಾರೆ.
ಅರೆ.. ಲಾಕ್ ಡೌನ್ ಮಧ್ಯೆ ಭಟ್ಟರು ಸಿನಿಮಾ ಮಾಡುತ್ತಿದ್ದಾರಾ ಎಂದುಕೊಳ್ಳಬೇಡಿ. ಅವರ ನಿರ್ದೇಶನದ ಗಾಳಿಪಟ 2ಗೆ ಲಾಕ್ ಡೌನ್ ಬ್ರೇಕ್ ಹಾಕಿದೆ. ಈಗ ಅವರು ಮಾಡ್ತಿರೋದು ಡಾಕ್ಯುಮೆಂಟರಿ.
ಕೊರೋನಾ ವಾರಿಯರ್ಸ್‍ಗೆ ಗೌರವ ಸೂಚಿಸುವ ಸಲುವಾಗಿ ಭಟ್ಟರು ನಿದೇಶಿಸುತ್ತಿರುವ ಸಾಕ್ಷ್ಯಚಿತ್ರದಲ್ಲಿ ಹೀರೋಗಳೆಂದರೆ ಡಾಕ್ಟರ್ಸ್ ಮತ್ತು ಪೊಲೀಸ್. ಒಂದು ವಿಡಿಯೋ ಸಾಂಗ್ ಕೂಡಾ ಇರಲಿದ್ದು, ಭಟ್ಟರೇ ಸಾಹಿತ್ಯ ಬರೆದಿದ್ದಾರೆ.