` ಲಾಕ್ ಡೌನ್ ಸಮಯದಲ್ಲಿಯೇ ಲಾಕ್ ಡೌನ್ ಸಿನಿಮಾ - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
mata fame guruprasad in lock down mood
Guruprasad

ಇದು ಮಠ, ಎದ್ದೇಳು ಮಂಜುನಾಥ ಖ್ಯಾತಿಯ ಗುರುಪ್ರಸಾದ್ ಮಾಡುತ್ತಿರುವ ಪ್ರಯೋಗ. ಈ ಲಾಕ್ ಡೌನ್ ಅವಧಿಯಲ್ಲಿಯೇ ಒಂದು ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ ಗುರು ಪ್ರಸಾದ್. ಕಥೆಯೂ ರೆಡಿಯಾಗಿದೆಯಂತೆ. ನಿರ್ಮಾಪಕರ ಜೊತೆ ಮಾತುಕತೆ ಆಗಬೇಕಿದೆ ಎನ್ನುವ ಗುರುಪ್ರಸಾದ್, ಚಿತ್ರವನ್ನು ಕಡಿಮೆ ಕಲಾವಿದರನ್ನಿಟ್ಟುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ.

ಅಂದಹಾಗೆ ಆ ಸಿನಿಮಾ ಸಿದ್ಧವಾದರೂ ಅದು ಥಿಯೇಟರಿಗೆ ಬರೋದಿಲ್ಲ. ಗುರುಪ್ರಸಾದ್ ಆ ಚಿತ್ರವನ್ನು ತಮ್ಮ ಅಧಿಕೃತ ಆ್ಯಪ್‍ನಲ್ಲಿ ಮಾತ್ರವೇ ಬಿಡುಗಡೆ ಮಾಡಲಿದ್ದಾರೆ. ಚಿತ್ರಕ್ಕೆ ಲಾಕ್ ಡೌನ್ ಅನ್ನೋ ಟೈಟಲ್ಲನ್ನೇ ಫೈನಲ್ ಮಾಡಿರುವ ಗುರುಪ್ರಸಾದ್, ಇದೊಂದು ಹೊಸ ಪ್ರಯೋಗ. ಹೇಗಿರುತ್ತೆ ಅನ್ನೊದನ್ನ ಸಿನಿಮಾ ನೋಡಿದವರೇ ಹೇಳಬೇಕು ಎನ್ನುತ್ತಾರೆ.