ಹಂಸಲೇಖ ನಾದಬ್ರಹ್ಮ. ಅವರು ಕೈ ಇಟ್ಟರೆ ಒಂದೊಳ್ಳೆ ಮ್ಯೂಸಿಕ್ ಸೃಷ್ಟಿಯಾಗುತ್ತೆ. ಪೆನ್ನು ಹಿಡಿದರೆ ಚೆಂದದ ಹಾಡು ಮೂಡುತ್ತೆ. ಅಂತಹ ಹಂಸಲೇಖ ಎಲ್ಲ ಬಿಟ್ಟು ಸಲಿಕೆ, ಗುದ್ದಲಿ ಹಿಡಿದಿದ್ದಾರೆ. ಮಹಾಲಕ್ಷ್ಮಿ ಲೇಔಟ್‍ನಲ್ಲಿ ಹಂಸಲೇಖ ಅವರ ಮನೆ ಇದೆ. ಮನೆಯ ಎದುರು ಇತ್ತೀಚೆಗೆ ಬಿಬಿಎಂಪಿ ಪೈಪ್‍ಲೈನ್ ಹಾಕೋಕೆ ರಸ್ತೆ ಅಗೆದಿತ್ತು.
ಅದಾದ ಮೇಲೆ ಲಾಕ್ ಡೌನ್ ಬಂತು. ಎಲ್ಲ ಸರಿಯಿದ್ದಾಗಲೇ ಕೆಲಸ ಕಂಪ್ಲೀಟ್ ಮಾಡದ ಬಿಬಿಎಂಪಿ, ಲಾಕ್ ಡೌನ್ ಟೈಂನಲ್ಲಿ ಕೆಲಸ ಕಂಪ್ಲೀಟ್ ಮಾಡೀತೇ.. ಇಲ್ಲೂ ಅದೇ ಆಯ್ತು. ಗುಂಡಿ ಹಾಗೆಯೇ ಉಳಿದುಕೊಳ್ತು. ಇದನ್ನು ಕೆಲವು ದಿನ ನೋಡಿದ ಹಂಸಲೇಖ ತಾವೇ ಕಾಮಗಾರಿಗೆ ಇಳಿದುಬಿಟ್ಟರು.
ಸ್ವತಃ ಸಲಿಕೆ ಹಿಡಿದು ಮಣ್ಣು, ಜಲ್ಲಿ ತುಂಬಿ ಗುಂಡಿಗಳನ್ನು ಮುಚ್ಚಿದ ಹಂಸಲೇಖ ಗುಂಡಿಗಳನ್ನು ತುಂಬಿ ಜಲ್ಲಿ ಪುಡಿ ಹಾಕಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಕಣ್ಣಿಗೆ ಕಾಣದ ಕೊರೋನಾ ವೈರಸ್‍ಗೆ ಹಾಡಿನ ಮೂಲಕ ಕ್ಲಾಸ್ ತೆಗೆದುಕೊಂಡಿದ್ದ ಹಂಸ, ಈ ಬಾರಿ ಬಿಬಿಎಂಪಿಯ ಕೆಲಸ ತಾವು ಮಾಡುವ ಮೂಲಕ ಬಿಬಿಎಂಪಿಗೆ ಬೇರೆಯದೇ ಪಾಠ ಹೇಳಿದ್ದಾರೆ.