ಮಿನುಗುತಾರೆ ಜಯಂತಿ ಈಗ ಇರೋದು ಬೆಂಗಳೂರಿನಲ್ಲಿ ಅಲ್ಲ. ಬಳ್ಳಾರಿಯಲ್ಲಿ. ಬಳ್ಳಾರಿಯ ಹೊಸಪೇಟೆಯಲ್ಲಿ ಹೋಟೆಲೊಂದರಲ್ಲಿದ್ದಾರೆ ಜಯಂತಿ. ಆಗಿದ್ದು ಇಷ್ಟು, ಬಳ್ಳಾರಿಯಲ್ಲಿ ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ಸ್ಪೆಷಲ್ ಪ್ರಾಜೆಕ್ಟ್‍ವೊಂದರ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಗನನ್ನು ನೋಡುವ ಸಲುವಾಗಿ ಬಳ್ಳಾರಿಗೆ ಹೋಗಿದ್ದಾರೆ ಜಯಂತಿ. ಅಲ್ಲಿಗೆ ಹೋದ ಮೇಲೆ ಲಾಕ್‍ಡೌನ್ ಘೋಷಣೆಯಾಗಿದೆ.
ಎಲ್ಲರಿಗೂ ಗೊತ್ತಿರೋ ಜಯಂತಿ ಅವರ ಆರೋಗ್ಯ ಸ್ವಲ್ಪ ಸೂಕ್ಷ್ಮವಾಗಿದೆ. ಅವರನ್ನು ಕುಟುಂಬದವರು ಎಚ್ಚರಿಕೆಯಿಂದ ಆರೈಕೆ ಮಾಡುತ್ತಿದ್ದಾರೆ. ಹೀಗಾಗಿಯೇ ಲಾಕ್‍ಡೌನ್ ಘೋಷಣೆ ನಂತರ ಬೆಂಗಳೂರಿಗೇ ಹೋಗಿಬಿಡಿ, ಅಗತ್ಯಬಿದ್ದರೆ ಅಲ್ಲಿ ವೈದ್ಯರ ಸಂಪರ್ಕ, ಚಿಕಿತ್ಸೆ ಸುಲಭ ಎಂದವರೇ ಹೆಚ್ಚು. ಆದರೆ ಜಯಂತಿ ಅದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಮಗನೊಂದಿಗೆ ಅದೇ ಹೋಟೆಲ್‍ನಲ್ಲಿ ವಾಸ್ತವ್ಯ ಮುಂದುವರಿಸಿದ್ದಾರೆ.
ಅಮ್ಮನಿಗೆ ಬಳ್ಳಾರಿ ಹೊಸದಲ್ಲ. ಹುಟ್ಟೂರು. ಇಲ್ಲಿನ ಮಣ್ಣಿನಲ್ಲಿ ಅವರಿಗೆ ಬಾಲ್ಯದ ನೆನಪುಗಳಿವೆ. ಅಮ್ಮ ಪ್ರತಿದಿನ ಹೋಟೆಲ್‍ನ ಆವರಣದಲ್ಲಿಯೇ ಒಂದಿಷ್ಟು ಹೊತ್ತು ವಾಕ್ ಮಾಡ್ತಾರೆ. ಇಲ್ಲಿ ಕೋತಿಗಳ ಕಾಟ ಹೆಚ್ಚು. ಅವುಗಳನ್ನು ನೋಡಿಕೊಂಡೇ ಮರದ ಕೆಳಗೆ ಕುಳಿತಿರುತ್ತಾರೆ. ಅಮ್ಮ ಖುಷಿಯಾಗಿದ್ದಾರೆ. ಆರೋಗ್ಯವಾಗಿದ್ದಾರೆ. ಅಗತ್ಯ ಬಿದ್ದರೆ ನೋಡೋಣ ಎಂದಿದ್ದಾರೆ ಕೃಷ್ಣ ಕುಮಾರ್.