` ಸರ್ಕಾರದ್ದಲ್ಲ, ರಾಬರ್ಟ್ ನಿರ್ಮಾಪಕರಿಂದಲೇ ಫಿಲಂ ಸಿಟಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
robert film producer plans for mini film city
Umapathy S Gowda

ಫಿಲಂ ಸಿಟಿ ಅನ್ನೋದು ಕನ್ನಡ ಚಿತ್ರರಂಗದ ಹಲವು ದಶಕಗಳ ಕನಸು. ಆದರೆ ಅದೇಕೋ ಏನೋ.. ಫಿಲಂ ಸಿಟಿಯ ಕನಸು ಸರ್ಕಾರದ ಪಾಲಿಗೆ ಫುಟ್‍ಬಾಲ್ ಆಗಿಬಿಟ್ಟಿದೆ. ಅತ್ತಿಂದಿತ್ತ.. ಇತ್ತಿಂದತ್ತ.. ಓಡಾಡುತ್ತಲೇ ಇದೆ. ಒದ್ದಾಡುತ್ತಲೇ ಇದೆ. ಹೀಗಿರುವಾಲೇ ನಿರ್ಮಾಪಕ ಉಮಾಪತಿ ಸ್ವತಃ ಮಿನಿ ಫಿಲಂ ಸ್ಟುಡಿಯೋ ಕನಸಿಗೆ ಕೈ ಹಾಕಿದ್ದಾರೆ.

ಕನಕಪುರ ರಸ್ತೆಯಲ್ಲಿ ಇದಕ್ಕಾಗಿಯೇ 16 ಎಕರೆ ಜಾಗ ಖರೀದಿಸಿರುವ ಉಮಾಪತಿ, ರಸ್ತೆ, ಹಳ್ಳಿ, ರೈಲ್ವೇ ಸ್ಟೇಷನ್, ಆಸ್ಪತ್ರೆ, ಬಂಗಲೆ ಮೊದಲಾದ ಸೆಟ್‍ಗಳನ್ನು ರೆಡಿ ಮಾಡಲು ಮುಂದಾಗಿದ್ದಾರೆ.

ಸಿನಿಮಾ ಎಂದ ಕೂಡಲೇ ನಮಗಿರುವ ಈಗಿನ ಆಯ್ಕೆ ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿ. ಬೇರೆ ಆಯ್ಕೆಗಳಿಲ್ಲ. ಅಲ್ಲಿಗೆ ಹೋದರೆ, ಅಲ್ಲಿನವರನ್ನೇ ಬಳಸಿಕೊಳ್ಳುವ ಅನಿವಾರ್ಯತೆಯೂ ಬರುತ್ತೆ. ಇದಕ್ಕೆಲ್ಲ ಇದೊಂದು ಪರಿಹಾರವಾಗಬಹುದು ಎಂಬ ನಿರೀಕ್ಷೆ ಇದೆ ಎನ್ನುತ್ತಾರೆ ಉಮಾಪತಿ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery