ನಟಿ, ಮಾಜಿ ಸಂಸದೆ, ಕಾಂಗ್ರೆಸ್ ನಾಯಕಿ ರಮ್ಯಾ ಎಲ್ಲಿ ಹೋದರು..? ಎಲ್ಲಿದ್ದಾರೆ..? ಹೇಗಿದ್ದಾರೆ..? ಏನು ಮಾಡುತ್ತಿದ್ದಾರೆ..? ಹೀಗೆ ಹಲವು ಪ್ರಶ್ನೆಗಳು ಅಭಿಮಾನಿಗಳ ನಡುವೆ ಏಳುತ್ತಿದ್ದರೂ, ರಮ್ಯಾ ಉತ್ತರ ಕೊಟ್ಟಿರಲಿಲ್ಲ. ಕಾಂಗ್ರೆಸ್‍ನ ರಾಷ್ಟ್ರೀಯ ಮಟ್ಟದ ಸೋಷಿಯಲ್ ಮೀಡಿಯಾ ವಿಂಗ್‍ನ ಮುಖ್ಯಸ್ಥೆಯಾಗಿದ್ದ ರಮ್ಯಾ, ಸೋಷಿಯಲ್ ಮೀಡಿಯಾದಿಂದಲೇ ನಾಪತ್ತೆಯಾಗಿದ್ದರು. ಈಗ ಮತ್ತೆ ಬಂದಿದ್ದಾರೆ.
ಯೆಸ್, 2019ರ ಜೂನ್ ನಂತರ ಡಿ-ಆಕ್ಟಿವೇಟ್ ಆಗಿದ್ದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರ ಟ್ವಿಟರ್ ಅಕೌಂಟ್ ಮತ್ತೆ ಆಕ್ಟಿವೇಟ್ ಆಗಿದೆ. ಅರ್ಥಾತ್, ರಮ್ಯಾ ವಾಪಸ್ ಆಗಿದ್ದಾರೆ. ಆದರೆ, ಯಾವುದೇ ಹೊಸ ಟ್ವೀಟ್ ಮಾಡಿಲ್ಲ. ರಿಯಾಕ್ಷನ್ ಕೂಡಾ ಇಲ್ಲ. ರಮ್ಯಾ ಬಂದರು ಎನ್ನುವುದಷ್ಟೇ ಸುದ್ದಿ.