ದಯಾಳ್ ಪದ್ಮನಾಭನ್ ನಿರ್ದೇಶನದ ಆ ಕರಾಳ ರಾತ್ರಿ ಕನ್ನಡ ಪ್ರೇಕ್ಷಕರ ಮನಸ್ಸು ಕದ್ದಿದ್ದ ಸಿನಿಮಾ. ಬೇರೆಯದ್ದೇ ವರ್ಗದ ಪ್ರೇಕ್ಷಕರನ್ನು ಥಿಯೇಟರಿಗೆ ಎಳೆದು ತಂದಿದ್ದ ಸಿನಿಮಾ, ವಿಭಿನ್ನ ಕಥೆ, ಕಾನ್ಸೆಪ್ಟ್‍ನಿಂದಾಗಿ ಗಮನ ಸೆಳೆದಿತ್ತು. ರಂಗಾಯಣ ರಘು, ಅನುಪಮಾ ಗೌಡ, ಕಾರ್ತಿಕ್ ಜಯರಾಮ್, ವೀಣಾ ಸುಂದರ್ ನಟಿಸಿದ್ದ ಚಿತ್ರವದು. 2018ರಲ್ಲಿ ರಿಲೀಸ್ ಆಗಿದ್ದ ಸಿನಿಮಾ ಹಿಟ್ ಎನಿಸಿಕೊಂಡಿತ್ತು.
ಈಗ ಆ ಸಿನಿಮಾ ತೆಲುಗಿನತ್ತ ಹೊರಟಿದೆ. ತೆಲುಗಿನಲ್ಲಿ ಹಲವು ನಿರ್ಮಾಪಕರು ಮುಂದೆ ಬಂದಿದ್ದರು. ಈಗ ತೆಲುಗಿಗೆ ದೊಡ್ಡ ಮೊತ್ತಕ್ಕೇ ಸಿನಿಮಾ ರೀಮೇಕ್ ರೈಟ್ಸ್ ಮಾರಾಟವಾಗಿದೆ. ಕೊರೋನಾ ಎಫೆಕ್ಟ್ ಸೈಲೆಂಟ್ ಆದ ನಂತರ ತೆಲುಗಿನಲ್ಲಿ ಆ ಕರಾಳ ರಾತ್ರಿ ಶುರುವಾಗಲಿದೆ.