ಪುನೀತ್ ಕನ್ನಡ ಚಿತ್ರರಂಗದ ಅಪ್ಪಟ ಫ್ಯಾಮಿಲಿ ಮ್ಯಾನ್. ಅದರಲ್ಲೇನು ಅನುಮಾನವಿಲ್ಲ. ಅವರ ಚಿತ್ರಗಳಿಗೆ ರಿಲೀಸ್ ಆದ ದಿನವೇ ಫ್ಯಾಮಿಲಿ ಪ್ರೇಕ್ಷಕರು ಬರುತ್ತಾರೆ. ಆದರೆ, ಅವರೀಗ ಅಪ್ಪಟ ಫ್ಯಾಮಿಲಿ ಮ್ಯಾನ್ ಆಗುತ್ತಿದ್ದಾರೆ. ಅವರ ನಿರ್ಮಾಣದ ಹೊಸ ಚಿತ್ರದ ಹೆಸರೇ ಫ್ಯಾಮಿಲಿ ಮ್ಯಾನ್.
ಪಿಆರ್‍ಕೆ ಪ್ರೊಡಕ್ಷನ್ಸ್ ಮೂಲಕ ಹೊಸಬರ ಚಿತ್ರಗಳನ್ನೇ ನಿರ್ಮಿಸುತ್ತ, ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿರುವ ಪುನೀತ್, ಈ ಬಾರಿ ಫ್ಯಾಮಿಲಿ ಮ್ಯಾನ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಸಂಕಷ್ಟಕರ
ಗಣಪತಿ ಅನ್ನೋ ವಿಭಿನ್ನ ಚಿತ್ರದ ಮೂಲಕ ಗಮನ ಸೆಳೆದಿದ್ದ ಎಸ್.ಅರ್ಜುನ್, ಈ ಚಿತ್ರಕ್ಕೆ ನಿರ್ದೇಶಕ. ಆ ಚಿತ್ರದ ಹೀರೋ ಲಿಖಿತ್ ಶೆಟ್ಟಿಯೇ ಈ ಚಿತ್ರಕ್ಕೂ ಹೀರೋ. ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸುತ್ತಿದ್ದಾರೆ. ಗುರುಕಿರಣ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.