` ಬಾಡಿಗೆ ಕಟ್ಟೋಕಾಗ್ತಿಲ್ಲ, ಬಿಟ್ ಬಿಡಿ : ಮಲ್ಟಿಪ್ಲೆಕ್ಸ್ ಮಾಲೀಕರ ಮನವಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mulriplex association expresses helplessness
Multiplex

`ಸುಮಾರು 20 ವರ್ಷಗಳಿಂದ ಮಲ್ಟಿಪ್ಲೆಕ್ಸ್ ನಡೆಸುತ್ತಿದ್ದೇವೆ. ಲಾಭವನ್ನೂ ಕಂಡಿದ್ದೇವೆ, ನಷ್ಟವನ್ನೂ ನೋಡಿದ್ದೇವೆ. ಆದರೆ, ಯಾವತ್ತೂ ರೀತಿ ಬಿಸಿನೆಸ್ ಮಾಡೋಕೇ ಆಗದೆ ಕೂತಿರಲಿಲ್ಲ. ದಯವಿಟ್ಟು ಬಾಡಿಗೆ ಮತ್ತು ಮೈಂಟೇನೆನ್ಸ್ ಚಾರ್ಜ್ ಕಟ್ಟೋಕೆ ಆಗುತ್ತಿಲ್ಲ. ಈ ತಿಂಗಳು ಬಿಟ್ಟು ಬಿಡಿ'

ಇದು ದೇಶದ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಮನವಿ. ಮಲ್ಟಿಪ್ಲೆಕ್ಸ್‍ಗಳ ಭೂಮಾಲೀಕರಿಗೆ ಇಂಥಾದ್ದೊಂದು ಮನವಿ ಮಾಡಿದೆ ಸಂಘ. ಈ ಅಸೋಸಿಯೇಷನ್ ಅಡಿಯಲ್ಲಿ ದೇಶದ ಶೇ.90ರಷ್ಟು ಮಲ್ಟಿಪ್ಲೆಕ್ಸ್‍ಗಳು ಬರುತ್ತವೆ. 18 ಭಾಷೆಗಳಲ್ಲಿ, 600ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‍ಗಳಲ್ಲಿರುವ ಸುಮಾರು 3000 ಸ್ಕ್ರೀನ್‍ಗಳಲ್ಲಿ ಒಂದು ತಿಂಗಳು ಒಂದೇ ಒಂದು ಶೋ ನಡೆದಿಲ್ಲ. ಕೋವಿಡ್ 19 ಎಫೆಕ್ಟ್. ಹೀಗಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಬಾಡಿಗೆ ಕಟ್ಟಲು ಆಗುತ್ತಿಲ್ಲ ಎಂದು ಮನವಿ ಮಾಡಿಕೊಂಡಿದೆ ಅಸೋಸಿಯೇಷನ್.

Also Read :-

Multiplex Association Pleads For Complete Waiver Of Rent And CAM Dues

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery