ಜೈ ಶ್ರೀರಾಮ್ ಎಂಬ ರಾಬರ್ಟ್ ಚಿತ್ರದ ಹಾಡು ಸೃಷ್ಟಿಸಿದ್ದ ಕ್ರೇಜ್ ಗೊತ್ತಿದೆಯಲ್ಲ, ಈಗ ಅದೇ ಹಾಡಿನ ಹೊಸ ವರ್ಷನ್ ಬಂದಿದೆ. ಈಗ ಆ ಹಾಡಿನ ಶಕ್ತಿ ಹೆಚ್ಚಿಸಿರುವುದು ಶಂಕರ್ ಮಹಾದೇವನ್. ರಾಮನವಮಿಗಾಗಿ ಹಾಡನ್ನು ಮತ್ತೊಮ್ಮೆ ಶಂಕರ್ ಮಹದೇವನ್ ಧ್ವನಿಯಲ್ಲಿ ರಿಲೀಸ್ ಮಾಡಿದ್ದಾರೆ ನಿರ್ದೇಶಕ ತರುಣ್ ಸುಧೀರ್.
ದಿವ್ಯ ಕುಮಾರ್ ಧ್ವನಿಯಲ್ಲಿದ್ದ ಹಾಡಿನಲ್ಲೇ ಕುಣಿದು ಕುಪ್ಪಳಿಸಿದ್ದ ಅಭಿಮಾನಿಗಳಿಗೆ ಶಂಕರ್ ಮಹದೇವನ್ ದೈವೀಕ ಕಂಠದ ಧ್ವನಿ ಇನ್ನಷ್ಟು ರೋಮಾಂಚನ ಹುಟ್ಟಿಸಿದೆ. ನಟ ದರ್ಶನ್ ಶ್ರೀರಾಮ ಶ್ಲೋಕವನ್ನು ಪಠಿಸಿ ಹಾಡನ್ನು ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.
ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರ, ಕೊರೋನಾ ಶಾಕ್ ಇಲ್ಲದೇ ಹೋಗಿದ್ದರೆ ಇದೇ ವಾರ ರಿಲೀಸ್ ಆಗಬೇಕಿತ್ತು. ಸದ್ಯಕ್ಕೆ ರಾಬರ್ಟ್ ಸೇರಿದಂತೆ ಯಾವುದೇ ಚಿತ್ರಗಳಿಗೆ ಏಪ್ರಿಲ್ ತಿಂಗಳಲ್ಲಿ ಥಿಯೇಟರು ಭಾಗ್ಯ ದೊರೆಯುವ ಲಕ್ಷಣಗಳಿಲ್ಲ.