ಎಣ್ಣೆ ಸಪ್ಲೈ ಮಾಡ್ಬಹುದೇನೋ ಕುಡುಕ್ರು ಸ್ವಲ್ಪ ತಡ್ಕಳಿ..
ಪೊಲೀಸ್ ಲಾಠಿ ಏಟು ತಿಂದವ್ರು ಮುಲಾಮು ಹಚ್ಕೊಳಿ..
ನಾವೆಲ್ಲ ಮನೇಲೆ ಇರೋಣ.. ಮಿಸ್ ಆದರೆ ಡೈರೆಕ್ಟು ಸ್ಮಶಾಣ..
ಎರಡು ಸಲ ಮಾಡ್ಕೊಳಿ ಸ್ನಾನ.. ತುಂಬ ಡೇಂಜರ್ ಕಣ್ರೋ ಈ ಕೊರೋನ.. ಕೊರೋನಾ.. ಕೊರೋನಾ..
ನಿಂಗೆ ಸದ್ಯದಲ್ಲೇ ಮಾಡ್ತಿವಿ ತಿಥಿನಾ..
ಇದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರ ಕೊರೋನಾ ಗೀತೆ. ಕೊರೋನಾ ಜಾಗೃತಿಗಾಗಿ ಮೊನ್ನೆ ಮೊನ್ನೆಯಷ್ಟೇ ಎಸ್‍ಪಿಬಿ ಹಾಡು ಹಾಡಿದ್ದರು. ಜಯಂತ ಕಾಯ್ಕಿಣಿ ಸಾಹಿತ್ಯ ಬರೆದಿದ್ದರು. ನವೀನ್ ಕೃಷ್ಣ ಏಕಪಾತ್ರಾಭಿನಯ ಮಾಡಿದ್ದರು. ಬೇರೆ ಬೇರೆ ಭಾಷೆಗಳಲ್ಲಿ ಹಾಡುಗಳ ಸುರಿಮಳೆಯೇ ಸುರಿಯತ್ತಿದೆ. ಕನ್ನಡದಲ್ಲಿ ರ್ಯಾಪ್ ಸಾಂಗ್ ಬಂದಿದೆ.