ಕೊರೋನಾ ಎಫೆಕ್ಟ್‍ನಿಂದಾಗಿ ಯಾರ್ಯಾರು ಎಲ್ಲೆಲ್ಲಿದ್ದರೋ.. ಅಲ್ಲಲ್ಲಿಯೇ ಲಾಕ್ ಆಗಿಬಿಟ್ಟಿದ್ದಾರೆ. ದುಡ್ಡಿದ್ದವರು ಬದುಕಿಕೊಳ್ತಾರೆ, ದುಡ್ಡಿಲ್ಲದೆ ಕೂಲಿನಾಲಿ ಮಾಡಿಕೊಂಡಿದ್ದವರ ಕಥೆ ಏನು..? ಮೈಸೂರಿನಲ್ಲಿ ಅಂತಹ ಕಷ್ಟದಲ್ಲಿದ್ದ ಕೆಲವು ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ್ದಾರೆ ದರ್ಶನ್ ಫ್ಯಾನ್ಸ್.
ಮೈಸೂರಿನ ಬೀದಿಗಳಲ್ಲಿ ಪರದಾಡುತ್ತಿದ್ದ ಬೇರೆ ಬೇರೆ ಕಡೆಯಿಂದ ಬಂದಿದ್ದ ಕೂಲಿಗಳ ಕುಟುಂಬಕ್ಕೆ ಟೊಮ್ಯಾಟೋ ಬಾತ್, ಮೊಸರನ್ನ ತಯಾರಿಸಿ ಹಂಚಿದ್ದಾರೆ. ಕುಡಿಯುವ ನೀರಿನ ಜೊತೆಗೆ. ಅಷ್ಟೇ ಅಲ್ಲ, ಅಗತ್ಯವಿದ್ದರು ತಮ್ಮ ನಂಬರ್‍ಗೆ ಕರೆ ಮಾಡುವಂತೆ ನಂಬರ್ ಕೊಟ್ಟು, ಸಹಾಯಕ್ಕಾಗಿ ಕರೆ ಮಾಡಿದವರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.