ಕೊರೋನಾ ವೈರಸ್‍ನಿಂದಾಗಿ ಇಡೀ ಭಾರತಕ್ಕೆ ಬಂದ್ ಘೋಷಿಸಲಾಗಿದೆ. ಕೊರೋನಾ ಭೀತಿ ಶುರುವಾದ ತಕ್ಷಣ ಮೊದಲಿಗೆ ಹೊಡೆತ ಬಿದ್ದಿದ್ದು ಚಿತ್ರರಂಗಕ್ಕೆ. ಮೊದಲು ರದ್ದಾಗಿದ್ದೆ ಚಿತ್ರಮಂದಿರಗಳು. ನಂತರ ಶೂಟಿಂಗ್. ಹೀಗಾಗಿ ಈಗಾಗಲೇ ಚಲನಚಿತ್ರ ರಂಗದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ 15 ದಿನಗಳಿಂದ ಕೆಲಸವಿಲ್ಲ. ಹೀಗಾಗಿಯೇ ಇಂತಹವರ ನೆರವಿಗೆ ಧಾವಿಸಿದೆ ತಮಿಳು ಚಿತ್ರರಂಗ. ಇದನ್ನು ಶುರು ಮಾಡಿದ್ದು ರಜನಿಕಾಂತ್.
ತಲೈವಾ ರಜನಿಕಾಂತ್, ತಮಿಳು ಚಲನಚಿತ್ರ ಕಾರ್ಮಿಕರ ಸಂಘಕ್ಕೆ 50 ಲಕ್ಷ ನೀಡುವ ಮೂಲಕ ಮೊದಲ ಹೆಜ್ಜೆಯಿಟ್ಟರೆ, ಉಳಿದ ನಟರು ಅದನ್ನು ಫಾಲೋ ಮಾಡಿದರು. ಸೂರ್ಯ, ಕಾರ್ತಿ, ವಿಜಯ್ ಸೇತುಪತಿ, ಶಿವಕಾರ್ತಿಕೇಯ ತಲಾ 10 ಲಕ್ಷ ರೂ. ನೀಡಿದರು. ಪ್ರಕಾಶ್ ರೈ 150 ಮೂಟೆ ಅಕ್ಕಿ ಒದಗಿಸಿಕೊಟ್ಟರು.
ತಮಿಳು ಚಿತ್ರರಂಗದ ಇನ್ನೂ ಹಲವು ಕಲಾವಿದರು ತಮ್ಮ ತಮ್ಮ ಕೈಲಾದ ಮಟ್ಟಿಗೆ ದಿನಸಿ, ಆಹಾರ, ಹಣಕಾಸು ನೆರವು ನೀಡಲು ಮುಂದೆ ಬಂದಿದ್ದಾರೆ. ಕನ್ನಡ ಚಿತ್ರರಂಗ..?