ತಮಿಳಿನಲ್ಲಿ ಕಳೆದ ವರ್ಷ ಸೆನ್ಸೇಷನ್ ಸೃಷ್ಟಿಸಿದ್ದ ಸಿನಿಮಾ ಅಸುರನ್. ಆ ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡಲಿದ್ದು, ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಚಿತ್ರದ ಬಗ್ಗೆ ಡಿಸ್ಕಷನ್ ನಡೆದಿರುವುದು ನಿಜ. ಇನ್ನೂ ಫೈನಲ್ ಆಗಿಲ್ಲ ಎಂದು ಸ್ವತಃ ಶಿವಣ್ಣ ಹೇಳಿದ್ದರು. ಈಗ ಬಂದಿರೋ ಸುದ್ದಿಯ ಪ್ರಕಾರ, ಚಿತ್ರಕ್ಕೆ ಡೈರೆಕ್ಟರ್ ಕೂಡಾ ಫಿಕ್ಸ್ ಆಗಿದ್ದಾರೆ.
ಕನ್ನಡ ಚಿತ್ರರಂಗದ ಸಂವೇದನಾ ಶೀಲ ಕಮರ್ಷಿಯಲ್ ಡೈರೆಕ್ಟರ್ ಜೇಕಬ್ ವರ್ಗಿಸ್ ಈ ಚಿತ್ರಕ್ಕೆ ನಿರ್ದೇಶಕರಂತೆ. ಪೃಥ್ವಿ, ಸವಾರಿಯಂತಹ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟಿರುವ ಜೇಕಬ್ ವರ್ಗಿಸ್, ಅಸುರನ್ ಚಿತ್ರದ ರೀಮೇಕ್ ನಿರ್ದೇಶನಕ್ಕೆ ಓಕೆ ಎಂದಿದ್ದಾರಂತೆ. ಅಸುರನ್‍ನ್ನು ತಮಿಳಿನಲ್ಲಿ ನಿರ್ದೇಶಿಸಿದ್ದ ವೆಟ್ರಿಮಾರನ್, ಕನ್ನಡದ ಅಸುರನ್‍ಗೆ ನಿರ್ಮಾಪಕರಾಗಲಿದ್ದಾರೆ ಎಂಬ ಸುದ್ದಿಯಿದೆ. ಅಧಿಕೃತವಾಗಿಲ್ಲ ಅಷ್ಟೆ.