ಕೊರೋನಾ ವೈರಸ್ ಕುರಿತಂತೆ ತಜ್ಞರು, ವೈದ್ಯರು, ಪೊಲೀಸರು, ಸರ್ಕಾರ ಅದೆಷ್ಟೇ ಜಾಗೃತಿ ಮೂಡಿಸುತ್ತಿದ್ದರೂ, ಜನರಿಗೆ ಅದು ಇನ್ನೂ ರೀಚ್ ಆಗಿಲ್ಲ. ಹೀಗಾಗಿಯೇ ದೊಡ್ಡ ದೊಡ್ಡ ಸ್ಟಾರ್ ನಟರು ಜನರಿಗಾಗಿ ಸಂದೇಶ ನೀಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಈ ಬಗ್ಗೆ ಮನವಿ ಮಾಡಿದ್ದಾರೆ.
ಈ ಕೊರೋನಾ ವೈರಸ್‍ನಿಂದ ಜನರನ್ನು ತಪ್ಪಿಸಲು ವೈದ್ಯರು, ಪೊಲೀಸ್ ಸಿಬ್ಬಂದಿ ಹಗಲಿರುಳೂ ಶ್ರಮಿಸುತ್ತಿದ್ದಾರೆ. ದಯಮಾಡಿ ನಿಮ್ಮ ಫ್ಯಾಮಿಲಿಗಾಗಿ, ನಿಮ್ಮ ನೆರೆಹೊರೆಯ ಗೆಳೆಯರಿಗಾಗಿ, ನಮಗಾಗಿ.. ಆದಷ್ಟೂ ಮನೆಯಲ್ಲೇ ಇರಿ. ಸುರಕ್ಷಿತವಾಗಿರಿ ಎಂದು ಸಂದೇಶ ನೀಡಿದ್ದಾರೆ ದರ್ಶನ್.
ಸೋಂಕು ಡೇಂಜರಸ್ ಎಂದು ಗೊತ್ತಿದ್ದೂ, ನಿಮ್ಮ ನಿಮ್ಮ ಊರುಗಳಿಗೆ ಹೋಗಿ, ಹಬ್ಬಕ್ಕಾಗಿ ಓಡಾಡಿ ದೇಶವನ್ನು ಇನ್ನಷ್ಟು ಅಪಾಯಕ್ಕೆ ಸಿಲುಕಿಸಬೇಡಿ. ಇದೇ ತಪ್ಪನ್ನು ಮಾಡಿ ಇಟಲಿ, ಸ್ಪೇನ್ ಏನೇನೆಲ್ಲ ಅನುಭವಿಸುತ್ತಿವೆ ಎಂಬುದನ್ನು ನೊಡುತ್ತಿದ್ದೇವೆ. ದಯಮಾಡಿ ಇದನ್ನು ನೆರವೇರಿಸಿಕೊಡಿ ಎಂದು ಮನವಿ ಮಾಡಿದ್ದಾರೆ ದರ್ಶನ್.