ಅವನು ಹುಟ್ಟಿದ್ದೇ ಎಲ್ಲ ಕಡೆ ಹುಡುಗರ ಸಂಖ್ಯೆ ಕಡಿಮೆ ಆಗಿ ಹುಡುಗೀರ ಸಂಖ್ಯೆ ಹೆಚ್ಚಾದಾಗ. ಅವನು ಹುಡುಗಿಯರಿಗಾಗಿಯೇ ಇರೋ ಹುಡುಗ..
ಹಾಗಂತ ಮಗನಿಗೆ ಸರ್ಟಿಫಿಕೇಟ್ ಕೊಡೋದು ಅವನ ತಾಯಿ. ಅವನೋ.. ಕಂಡ ಕಂಡ ಹುಡುಗಿಯರಿಗೆಲ್ಲ ಐ ಲವ್ ಯೂ ಹೇಳೋ ತುಂಟ.
ಅಂತಹ ತುಂಟನಿಗೆ ಅವಳ ಮೇಲೆ ನಿಜವಾಗಿಯೂ ಲವ್ ಆಗ್ಬಿಡುತ್ತೆ. ಅವಳೋ ಚೆಲುವಾತಿ ಚೆಲುವೆ. ಅವಳಿಗೆ ಆಲ್‍ರೆಡಿ 16 ಬಾಯ್‍ಫ್ರೆಂಡ್ಸ್. ಲೇಡಿ ಶ್ರೀಕೃಷ್ಣ. ಅವಳನ್ನು ಪಟಾಯಿಸಿಕೊಂಡು ಲವ್ ಮಾಡಬೇಕು ನಾಯಕ. ಸಕ್ಸಸ್ ಆಗ್ತಾನಾ..?
ಅರೆ.. ಇದೇ ಕಣ್ರಿ ಶೋಕಿವಾಲನ ಕಥೆ. ಜಾಕಿ ತಿಮ್ಮೇಗೌಡ ಇಡೀ ಚಿತ್ರವನ್ನು ತುಂಟತನದಿಂದಲೇ ನಿರೂಪಿಸಿದ್ದಾರಂತೆ. ಅಜಯ್ ರಾವ್, ಸಂಜನಾ ಆನಂದ್ ಪ್ರಧಾನ ಪಾತ್ರದಲ್ಲಿರೋ ಚಿತ್ರ ಕಂಪ್ಲೀಟ್ ತುಂಟಾಟದ ಕಾಮಿಡಿ ಫ್ಯಾಮಿಲಿ ಚಿತ್ರವಂತೆ.