ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಅರ್ಧ ರಾಜ್ಯವೇ ನಿಷೇಧಾಜ್ಞೆಯಲ್ಲಿದೆ. ಕಳೆದ ವಾರದಿಂದ ಆರಂಭವಾಗಿದ್ದು ಕೊರೋನಾ ಬಂದ್ ಈ ವಾರವೂ ಕೂಡಾ ಕಂಟಿನ್ಯೂ ಆಗಿದೆ. ಚಿತ್ರಮಂದಿರ ಹಾಗೂ ಮಾಲ್‍ಗಳಲ್ಲಿ ಪ್ರದರ್ಶನ ಬಂದ್ ಆಗಿರುವ ಕಾರಣ, ಚಿತ್ರೋದ್ಯಮಕ್ಕೆ ಅಪಾರ ನಷ್ಟವಾಗಿದೆ. ಆದರೂ ಆರೋಗ್ಯದ ದೃಷ್ಟಿಯಿಂದ ಇದನ್ನು ಸಹಿಸಿಕೊಳ್ಳಲೇಬೇಕು ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಬಂದ್ ತೆರವಾದ ನಂತರ, ಬಂದ್ ಆರಂಭಕ್ಕೂ ಮುನ್ನ ಥಿಯೇಟರಿನಲ್ಲಿದ್ದ ಚಿತ್ರಗಳನ್ನೇ ಪ್ರದರ್ಶನ ಮಾಡುವಂತೆ ಪ್ರದರ್ಶಕರಿಗೆ ಮನವಿ ಮಾಡಿದ್ದಾರೆ. ಹೆಚ್ಚುವರಿ ಶುಲ್ಕ ವಿಧಿಸದಂತೆ ಕ್ಯೂಬ್‍ನವರಿಗೂ ಮನವಿ ಮಾಡಿದ್ದಾರೆ. ಹೊಸದಾಗಿ ಮುಹೂರ್ತ, ಶೂಟಿಂಗ್ ಬೇಡ ಎಂದು ನಿರ್ಮಾಪಕರಿಗೆ ಕೇಳಿಕೊಂಡಿದ್ದಾರೆ