ನಭೂತೋ ನಭವಿಷ್ಯತಿ ಎಂಬಂತೆ ನಡೆಸಲು ಯೋಜಿಸಲಾಗಿದ್ದ ನಿಖಿಲ್ ಕುಮಾರಸ್ವಾಮಿ ಮದುವೆಗೆ ಚೈನೀಸ್ ವೈರಸ್ ಬ್ರೇಕ್ ಹಾಕಿದೆ. ಏಪ್ರಿಲ್ 17ರಂದು ರಾಮನಗರದಲ್ಲಿ 100 ಎಕರೆ ಜಾಗದಲ್ಲಿ ನಡೆಯಬೇಕಿದ್ದ ಮದುವೆ ಶಿಫ್ಟ್ ಆಗಿದೆ. ಈಗಾಗಲೇ ಮಂಟಪ ಕಟ್ಟಲು ನಡೆಯುತ್ತಿದ್ದ ಕೆಲಸವನ್ನು ನಿಲ್ಲಿಸಲಾಗಿದೆ.
ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮದುವೆಯನ್ನು ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆಸುವ ಯೋಜನೆ ಇದೆ. ಆದರೆ ಎಲ್ಲಿ ಎನ್ನುವುದು ಇನ್ನೂ ಪಕ್ಕಾ ಆಗಿಲ್ಲ ಎಂದಿದ್ದಾರೆ ನಿಖಿಲ್.
ಏ.17ರಂದು ನಿಖಿಲ್-ರೇವತಿ ಮದುವೆ ನಿಶ್ಚಯವಾಗಿತ್ತು. ಕೆಲವರಿಗೆ ಲಗ್ನಪತ್ರಿಕೆಯನ್ನೂ ಹಂಚಲಾಗಿತ್ತು. ಆದರೆ, ಈಗ ಎಲ್ಲದಕ್ಕೂ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಕೊರೋನಾ ಬ್ರೇಕ್.