ನಟ ಧ್ರುವ ಸರ್ಜಾ ಪೊಗರು ಚಿತ್ರವನ್ನು ಹೆಚ್ಚೂ ಕಡಿಮೆ ಮುಗಿಸಿದ್ದಾರೆ. ಮುಂದಿನ ಚಿತ್ರವೂ ಫಿಕ್ಸ್ ಆಗಿದೆ. ಒನ್ಸ್ ಎಗೇಯ್ನ್ ನಂದ ಕಿಶೋರ್ ಜೊತೆ. ಮುಂದಿನ ಚಿತ್ರಕ್ಕೆ ನಿರ್ಮಾಪಕ ಉದಯ್ ಮೆಹ್ತಾ ಅನ್ನೋದು ಕೂಡ ಪಕ್ಕಾ ಆಗಿದೆ. ಇದರ ನಡುವೆಯೇ ಹೊರಬಂದಿರೋ ಸುದ್ದಿ ಇದು. ಧ್ರುವ ಮುಂದಿನ ಚಿತ್ರ ತೆಲುಗು ರೀಮೇಕ್ ಎಂಬ ಸುದ್ದಿ.
ಕಾರಣ ಇಷ್ಟೆ, ಧ್ರುವ ಸರ್ಜಾ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಗೆ ಕಾಲ್‍ಶೀಟ್ ಕೊಟ್ಟಿದ್ದಾರೆ. ಅಧ್ಯಕ್ಷ ಇನ್ ಅಮೆರಿಕ ಚಿತ್ರವನ್ನು ನಿರ್ಮಿಸಿದ್ದ ಸಂಸ್ಥೆ ಅದು. ತೆಲುಗಿನಲ್ಲಿ ಅದೇ ಸಂಸ್ಥೆ ನಿನ್ನು ಕೋರಿ ಅನ್ನೋ ಸಿನಿಮಾ ನಿರ್ಮಾಣ ಮಾಡಿತ್ತು. ನಾನಿ ಅಭಿನಯದ ಆ ಸಿನಿಮಾ ತೆಲುಗಿನಲ್ಲಿ ಹಿಟ್ ಆಗಿತ್ತು. ಅದೇ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಲಿದೆ ಎಂಬ ಸುದ್ದಿ ದೊಡ್ಡದಾಗಿ ಕೇಳಿ ಬರುತ್ತಿದೆ.
ಅಂದಹಾಗೆ ಧ್ರುವ ಇದುವರೆಗೆ ನಟಿಸಿರುವ 3 ಚಿತ್ರಗಳೂ ಸ್ವಮೇಕ್. ಪೊಗರು ಕೂಡಾ ಸ್ವಮೇಕ್. ತಮ್ಮ ಸ್ವಮೇಕ್ ಕಮಿಟ್‍ಮೆಂಟ್‍ನ್ನು ಧ್ರುವ ಮುರಿಯುತ್ತಾರಾ.. ಕಾದು ನೋಡಬೇಕಿದೆ