2019, ನೀನಾಸಂ ಸತೀಶ್‍ಗೆ ಮಿಶ್ರ ವರ್ಷ. 2002 ಭಾರಿ ನಿರೀಕ್ಷಯ ವರ್ಷ. ಈಗಾಗಲೇ ಸತೀಶ್ 3 ಚಿತ್ರಗಳಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ಒಂದೆಡೆ ಗೋದ್ರಾ ರಿಲೀಸ್ ಆಗೋಕೆ ರೆಡಿಯಾಗುತ್ತಿದ್ದರೆ, ಮತ್ತೊಂದೆಡೆ ಶರ್ಮಿಳಾ ಮಾಂಡ್ರೆ ನಿರ್ಮಾಣದ ಚಿತ್ರದ ಶೂಟಿಂಗ್ ಅರ್ಧ ಮುಗಿಸಿದ್ದಾರೆ. ಇದರ ಜೊತೆಯಲ್ಲೇ ಹೊಸ ಚಿತ್ರಗಳಿಗೆ ರೆಡಿಯಾಗುತ್ತಿದ್ದಾರೆ.
ಬ್ರಹ್ಮಚಾರಿ ಚಿತ್ರ ನಿರ್ದೇಶಿಸಿದ್ದ ಚಂದ್ರಮೋಹನ್ ಜೊತೆ ಇನ್ನೊಂದು ಚಿತ್ರಕ್ಕೆ ಓಕೆ ಎಂದಿದ್ದಾರಂತೆ. ಜೊತೆಯಲ್ಲಿ ರವಿ ಎಂಬ ಹೊಸ ಪ್ರತಿಭೆಗೆ ನಿರ್ದೇಶನದ ಚಾನ್ಸ್ ಕೊಡುತ್ತಿದ್ದಾರೆ ಸತೀಶ್. ಇದರ ಜೊತೆ ಜೊತೆಗೆ ಹೊಸ ಹೊಸ ಕಥೆಗಳನ್ನೂ ಕೇಳುತ್ತಿದ್ದಾರೆ.