ಶರಣ್, ಸಿಂಪಲ್ ಸುನಿ, ಅಶಿಕಾ ರಂಗನಾಥ್‍ರನ್ನು ಒಗ್ಗೂಡಿಸಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ, ಅವತಾರ ಪುರುಷ ಎಂಬ ವಿಭಿನ್ನ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಆದರೆ, ಮಾತಿನ ಭಾಗದ ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಈಗ ಅರ್ಜುನ್ ಜನ್ಯ ಅವರಿಗಾಗಿ ಕಾಯುತ್ತಿದೆ.
ಚಿತ್ರದಲ್ಲಿ ಚುಟು ಚುಟು ಮಾದರಿಯ ಒಂದು ಉತ್ತರ ಕರ್ನಾಟಕ ಶೈಲಿಯ ಗೀತೆ, ಹೀರೋ ಇಂಟ್ರೊಡಕ್ಷನ್ ಸಾಂಗ್, ಒಂದು ರೊಮ್ಯಾಂಟಿಕ್ ಸಾಂಗ್ ರೆಡಿಯಾಗಬೇಕಿದೆ. ಅರ್ಜುನ್ ಜನ್ಯ ರಿಕವರಿ ಆಗಿ ಬಂದ ತಕ್ಷಣ ಕೆಲಸ ಶುರುವಾಗಲಿದೆ ಎಂದಿದ್ದಾರೆ ಸಿಂಪಲ್ ಸುನಿ.
ಇತ್ತೀಚೆಗೆ ಹೃದಯಾಘಾತಕ್ಕೊಳಗಾಗಿದ್ದ ಅರ್ಜುನ್ ಜನ್ಯ, ಸದ್ಯಕ್ಕೆ ವಿಶ್ರಾಂತಿಯಲ್ಲಿದ್ದಾರೆ. ಅವರು ಚೇತರಿಸಿಕೊಂಡು ಬಂದ ನಂತರವೇ ಮ್ಯೂಸಿಕ್ ಕೆಲಸ ಶುರುವಾಗಲಿದೆ.