ಸ್ಯಾಂಡಲ್‍ವುಡ್‍ನ ಹಲವು ನಟರು ಅಯ್ಯಪ್ಪ ಸ್ವಾಮಿ ಭಕ್ತರು. ಪ್ರತಿವರ್ಷ ಶಬರಿಮಲೆಗೆ ಹೋಗುತ್ತಾರೆ. ಅಯ್ಯಪ್ಪ ಮಾಲೆ ಧರಿಸುತ್ತಾರೆ. ಈ ಬಾರಿಯೂ ಅಷ್ಟೆ, ಶಿವರಾಜ್ ಕುಮಾರ್ ಮತ್ತವರ ತಂಡ ಶಬರಿಮಲೆಗೆ ಹೋಗಬೇಕಿತ್ತು. ಮಾಲೆಯನ್ನೂ ಧರಿಸಿ ಆಗಿತ್ತು. ಆದರೆ ಹೋಗಲು ಸಾಧ್ಯವಾಗಲಿಲ್ಲ. ಕಾರಣ, ಕೊರೋನಾ.
ಹೀಗಾಗಿ ಈ ಬಾರಿ ಎಂದಿನಂತೆಯೇ ಇಲ್ಲಿ ಪೂಜೆ ಮಾಡಿದ ಶಿವಣ್ಣ ಮತ್ತವರ ತಂಡ, ಜಾಲಹಳ್ಳಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಲೆ ತೆಗೆದರು. ಶಿವಣ್ಣ ಜೊತೆ ವಿಜಯ್ ರಾಘವೇಂದ್ರ, ರಘುರಾಮ್ ಸೇರಿದಂತೆ ಹಲವರು ಜೊತೆಯಲ್ಲಿದ್ದರು.
ಅಪ್ಪಾಜಿ ಇದ್ದ ಕಾಲದಿಂದಲೂ ಮಾಲೆ ಹಾಕುತ್ತಿದ್ದೇವೆ. ಈಗ ನಾನು, ರಾಘು, ಪುನೀತ್ ಮೂರೂ ಜನ ಮಾಲೆ ಧರಿಸುತ್ತೇವೆ.
ಇದೇ ಮೊದಲ ಬಾರಿ ಶಬರಿಮಲೆಗೆ ಹೋಗೋಕೆ ಆಗುತ್ತಿಲ್ಲ. ಕೇರಳ ಸರ್ಕಾರದ ಕಾಳಜಿ ಅರ್ಥವಾಗುತ್ತೆ. ಬೇಗ ದೇಶ ಕೊರೋನಾ ಮುಕ್ತವಾಗಲಿ ಎಂದಿದ್ದಾರೆ ಶಿವರಾಜ್ ಕುಮಾರ್.