ಲವರ್ ಬಾಯ್, ಫ್ಯಾಮಿಲಿ ಬಾಯ್ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸುತ್ತಿದ್ದ ನಟ ವಿಜಯ್ ರಾಘವೇಂದ್ರ ಈಗ ಹೆದರಿಸೋಕೆ ರೆಡಿಯಾಗುತ್ತಿದ್ದಾರೆ. ಯೆಸ್, ಅವರು ನಟಿಸುತ್ತಿರುವ ಹೊಸ ಚಿತ್ರದ ಹೆಸರು 3ಬಿಹೆಚ್‍ಕೆ. ಅದು ಹಾರರ್ & ಥ್ರಿಲ್ಲರ್ ಸಿನಿಮಾ.
ಕೋಮಾ ಎಂಬ ಚಿತ್ರ ನಿರ್ದೇಶಿದ್ದ ಚೇತನ್ ಹಾಗೂ ರವಿ ಎಂಬುವವರು ಈ ಚಿತ್ರಕ್ಕೆ ಡೈರೆಕ್ಟರ್ಸ್. ಇದು ಹಾರರ್ ಥ್ರಿಲ್ಲರ್, ಒಂದೇ ಮನೆಯಲ್ಲಿ ನಡೆಯುವ ಕಥೆ. ಆದರೆ, ಇಲ್ಲಿ ಗೆಜ್ಜೆ ಶಬ್ಧ, ಉದ್ದ ಕೂದಲು, ಬಿಳಿ ಸೀರೆ, ಮಂತ್ರವಾದಿ ಇರಲ್ಲ ಎಂದು ಕಾಮಿಡಿಯಾಗಿಯೇ ಹೇಳಿದ್ದಾರೆ ವಿಜಯ್ ರಾಘವೇಂದ್ರ. ದಿವ್ಯಾ ಉರುಡಗ ಈ ಚಿತ್ರಕ್ಕೆ ನಾಯಕಿ.