ಲವ್ ಸ್ಟೋರಿಗಳನ್ನು ಚೆಂದವಾಗಿ ಹೇಳಿ ಗೆಲ್ಲೋ ಎ.ಪಿ.ಅರ್ಜುನ್, ಈಗಾಗಲೇ ಕಿಸ್ ಚಿತ್ರದ ಗುಂಗಿನಿಂದ ಹೊರಬಂದು ಅದ್ದೂರಿ ಲವರ್ ಬೆನ್ನು ಹತ್ತಿದ್ದಾರೆ. ಅದ್ಧೂರಿ ಲವರ್ ಶೂಟಿಂಗ್ ನಡೆಯುತ್ತಿರುವಾಗಲೇ ಮತ್ತೊಂದು ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಹೀರೋ.
ಅತ್ತ ತೆಲುಗಿನ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇತ್ತ ಅರ್ಜುನ್ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ತಿಂಗಳು ಸ್ಕ್ರಿಪ್ಟ್ ಪೂಜೆ ನಡೆಯಲಿದೆಯಂತೆ.
ಸ್ವತಃ ನಿಖಿಲ್ ಕುಮಾರಸ್ವಾಮಿಯೇ ಹೀರೊ ಆಗಲಿದ್ದು, ನಿರ್ಮಾಪಕರೂ ಅವರೇ. ಹೀಗಾಗಿ ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಸಿನಿಮಾ ಹೊರತರುವ ಯೋಜನೆಯಲ್ಲಿದ್ದಾರೆ.