ಅನುಷ್ಕಾ ಶೆಟ್ಟಿ, ಕನ್ನಡತಿಯೇ ಆದರೂ ಹೆಸರು ಮಾಡಿದ್ದು ತೆಲುಗು ಚಿತ್ರರಂಗದಲ್ಲಿ. ಟಾಲಿವುಡ್ನ ಲೇಡಿ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ. ಅನುಷ್ಕಾ ಶೆಟ್ಟಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ಪುರಿ ಜಗನ್ನಾಥ್. ಅನುಷ್ಕಾ ಶೆಟ್ಟಿ ಜೊತೆ ಹೀರೋ ಆಗಿ ನಟಿಸಿದ್ದವರು ಮಾಸ್ ಮಹಾರಾಜ ಎಂದೇ ಹೆಸರಾಗಿರುವ ರವಿತೇಜ. ಅನುಷ್ಕಾ ಶೆಟ್ಟಿ ಬೆಳೆಯುತ್ತಿರುವಾಗಲೇ ನಾಯಕಿಯಾಗಿ ತನ್ನದೇ ಚಾರ್ಮ್ ಸೃಷ್ಟಿಸಿದ ನಟಿ ಚಾರ್ಮಿ ಕೌರ್. ವಿಶೇಷವೆಂದರೆ ಈ ಮೂರೂ ಜನ ಅನುಷ್ಕಾ ಶೆಟ್ಟಿ ಅವರನ್ನು ಭೇಟಿಯಾದಾಗಲೆಲ್ಲ ಅವರ ಕಾಲು ಮುಟ್ಟಿ ನಮಸ್ಕರಿಸ್ತಾರಂತೆ.
ಈ ರಹಸ್ಯವನ್ನು ಹೊರಗಿಟ್ಟಿದ್ದು ಬೇಱರೂ ಅಲ್ಲ, ಸ್ವತಃ ಪುರಿ ಜಗನ್ನಾಥ್. ಅನುಷ್ಕಾ ಶೆಟ್ಟಿ ಅಭಿನಯದ ನಿಶ್ಯಬ್ಧಂ ಚಿತ್ರ ರಿಲೀಸ್ ಆಗೋಕೆ ರೆಡಿಯಾಗಿದೆ. ಆ ಚಿತ್ರದ ಕುರಿತ ಕಾರ್ಯಕ್ರಮದಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಅನುಮಾನವಿದ್ದರೆ ನೀವು ರವಿತೇಜ, ಚಾರ್ಮಿಯನ್ನು ಕೇಳಿಕೊಳ್ಳಬಹುದು ಎಂದಿದ್ದಾರೆ. ಇದು ತಮಾಷೆಯೋ.. ಸೀರಿಯಸ್ಸೋ ಅರ್ಥವಾಗದ ಸ್ಥಿತಿ ಅಭಿಮಾನಿಗಳದ್ದು.