ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ವಿದೇಶಕ್ಕೆ ಹನಿಮೂನ್‍ಗೆ ಹೋಗಿದ್ದಾರೆ. ಅವರು ಬಂದ ತಕ್ಷಣ ಅವರಿಗೆ ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಸಂಘಟನೆಯೊಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿತ್ತು. ವಿಚಿತ್ರವೇನು ಗೊತ್ತೇ..? ಆ ಸಂಘಟನೆಯವರು ಮನವಿ ಮಾಡುವ ಹೊತ್ತಿಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಇಂಡಿಯಾಗೆ ವಾಪಸ್ ಬಂದು ವಾರವಾಗಿತ್ತು. ಅಷ್ಟೆ ಅಲ್ಲ, ನಿವೇದಿತಾ ಆಗಲೇ ಏರ್‍ಪೋರ್ಟ್‍ನಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ಹನಿಮೂನ್ ಸಂಭ್ರಮ ಮುಗಿದು, ನಿತ್ಯ ಜೀವನ ಶುರುವಾಗಿದೆ.
ನಾವು ವಾರದ ಹಿಂದೆಯೇ ವಾಪಸ್ ಬಂದಿದ್ದೇವೆ. ನಾವು ಇಟಲಿಗೆ ಹೋಗಲೇ ಇಲ್ಲ. ನೆದರ್‍ಲ್ಯಾಂಡ್‍ಗೆ ಹೋಗಿದ್ದೆವು. ವಾಪಸ್ ಬಂದಿದ್ದೇವೆ. ಏರ್‍ಪೋರ್ಟ್‍ನಲ್ಲಿ ಪರೀಕ್ಷೆ ಸುದೀರ್ಘವಾಗಿ ನಡೆಯಿತು. ನೋ ಪ್ರಾಬ್ಲಂ ಎಂದಿದ್ದಾರೆ ಚಂದನ್ ಶೆಟ್ಟಿ.
ನಿವೇದಿತಾ ಅವರ ತಾಯಿ ಹೇಮ ಕೂಡಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಾವು ಮಗಳನ್ನು ತುಂಬಾ ಎಚ್ಚರಿಕೆಯಿಂದ ಬೆಳೆಸಿದ್ದೇವೆ. ಅವರು ವಾಪಸ್ ಬಂದಾಗಲೂ ಇಷ್ಟು ಆತಂಕವಾಗಿರಲಿಲ್ಲ. ಈಗ ಇವರೆಲ್ಲ ಕೇಳುತ್ತಿದ್ದರೆ ಭಯವಾಗುತ್ತಿದೆ ಎಂದಿದ್ದಾರೆ ಹೇಮ.
ಸಿಂಪಲ್ಲಾಗ್ ಹೇಳ್ಬೇಕಂದ್ರೆ, ಚಂದನ್ ಶೆಟ್ಟಿ, ನಿವೇದಿತಾ ಇಬ್ಬರೂ ಚೆನ್ನಾಗಿದ್ದಾರೆ. ಅವರಿಬ್ಬರಿಗೂ ಕೊರೋನಾ ಟೆಸ್ಟ್ ಆಗಿದೆ. ಅವರಿಬ್ಬರಿಗೂ ಕೊರೋನಾ ಸೋಂಕು ಇಲ್ಲ.
Also Read :-
ಚಂದನ್ ಶೆಟ್ಟಿ, ನಿವೇದಿತಾಗೆ ಬಂದ ತಕ್ಷಣ ಕೊರೋನಾ ಟೆಸ್ಟ್ ಮಾಡ್ಸಿ - ಡಿಸಿಗೆ ಮನವಿ