ಕೊರೋನಾ ಎಫೆಕ್ಟ್ ಆರಂಭದಲ್ಲಿ ಚಿತ್ರಗಳ ಶೂಟಿಂಗ್ಗೆ ಪೆಟ್ಟು ನೀಡಿತ್ತು. ಯುವರತ್ನ, ರಾಬರ್ಟ್, ಅರ್ಜುನ್ ಗೌಡ, ಗಾಳಿಪಟ 2 ಮೊದಲಾದ ಚಿತ್ರಗಳ ಚಿತ್ರೀಕರಣ ಪ್ಲಾನ್ ಕ್ಯಾನ್ಸಲ್ ಆಗಿತ್ತು. ಅಷ್ಟೇ ಅಲ್ಲ, ಈ ತಿಂಗಳು ಹಾಗೂ ಮುಂದಿನ ತಿಂಗಳಿನ ಹಲವು ಚಿತ್ರಗಳ ರಿಲೀಸ್ ಡೇಟ್ ಚೇಂಜ್ ಆಗುತ್ತಿವೆ. ರಾಬರ್ಟ್ ಚಿತ್ರದ ಆಡಿಯೋ ರಿಲೀಸ್ ಡೇಟ್ ಕ್ಯಾನ್ಸಲ್ ಆಗಿದೆ. ಹೀಗಿರುವಾಗಲೇ ಚಿತ್ರರಂಗದ ಮೇಲೆ ದೊಡ್ಡ ಹೊಡೆತವೊಂದು ಬಿದ್ದಿದೆ.
ಇನ್ನು ಮುಂದೆ, ಸರ್ಕಾರ ಮುಂದಿನ ಆದೇಶ ನೀಡುವವರೆಗೆ ಚಿತ್ರಮಂದಿರಗಳು ಬಂದ್ ಆಗಲಿವೆ. ಈಗ ರಿಲೀಸ್ ಆಗಿರುವ ಚಿತ್ರಗಳಾಗಲೀ, ಸಕ್ಸಸ್ ಆಗಿ ನಡೆಯುತ್ತಿರುವ ಚಿತ್ರಗಳಾಗಲೀ, ರಿಲೀಸ್ ಆಗಲಿರುವ ಚಿತ್ರಗಳ ಪ್ರದರ್ಶನವಾಗಲೀ ಇರುವುದಿಲ್ಲ. ಮಾಲ್ಗಳಲ್ಲಾಗಲೀ, ಸಿಂಗಲ್ ಸ್ಕ್ರೀನ್ ಥಿಯೇಟರುಗಳಲ್ಲಾಗಲೀ ಶೋ ಇರುವುದಿಲ್ಲ. ಸದ್ಯಕ್ಕೆ ಒಂದು ವಾರ ಬಂದ್ ಎಂದು ಪ್ರದರ್ಶಕರ ಸಂಘವೂ ಅಧಿಕೃತವಾಗಿ ಘೋಷಿಸಿದೆ.
ಒಂದು ವಾರದ ನಂತರ ಸಿನಿಮಾ ಪ್ರದರ್ಶನ ಶುರುವಾಗುತ್ತಾ..? ಕಾದು ನೋಡಬೇಕು. ಎಲ್ಲವೂ ಕೊರೋನಾ ಮೇಲೆ ನಿಂತಿದೆ.