ರಚಿತಾ ರಾಮ್ ಅವರಿಗೆ ಹೊಸ ಅಣ್ಣ ಸಿಕ್ಕಿದ್ದಾರೆ. ಅದು ರಮೇಶ್ ಅರವಿಂದ್ ರೂಪದಲ್ಲಿ. ಶಿವಾಜಿ ಸುರತ್ಕಲ್ ಸಕ್ಸಸ್ ಜೋಶ್‍ನಲ್ಲಿರುವ ರಮೇಶ್, 100 ಚಿತ್ರವನ್ನು ನಿರ್ದೇಶಿಸುತ್ತಿರುವುದು ಗೊತ್ತಿದೆಯಷ್ಟೇ.. ಆ ಚಿತ್ರದಲ್ಲಿ ರಮೇಶ್ ತಂಗಿಯ ಪಾತ್ರ ರಚಿತಾ ರಾಮ್ ಅವರದ್ದು.
ಕಥೆ ಕೇಳಿದೆ, ರಮೇಶ್ ಸರ್ ಅವರದ್ದೇ ಡೈರೆಕ್ಷನ್ ಎಂದು ಗೊತ್ತಾಯ್ತು. ತಕ್ಷಣ ಓಕೆ ಎಂದೆ, ನಾನಿಲ್ಲಿ ರಮೇಶ್ ಸರ್ ತಂಗಿ. ಸೆಲ್ಫಿ ಹುಚ್ಚು, ಸೋಷಿಯಲ್ ಮೀಡಿಯಾ ಹುಚ್ಚು. ಮನೆಯಲ್ಲಿನ ಪ್ರತಿಯೊಂದನ್ನೂ ಸೆಲ್ಫಿ ತೆಗೆದು ಸೋಷಿಯಲ್ ಮೀಡಿಯಾಗೆ ಹಾಕುತ್ತಿರುತ್ತೇನೆ. ಅದು ಹೇಗೆ ಮಿಸ್ ಯೂಸ್ ಆಗುತ್ತೆ, ಅದರಿಂದ ಬಚಾವ್ ಆಗೋಕೆ ಏನೇನೆಲ್ಲ ಮಾಡಬೇಕಾಗುತ್ತೆ ಅನ್ನೋದು ಚಿತ್ರದ ಕಥೆ ಎನ್ನುತ್ತಾರೆ ರಚಿತಾ ರಾಮ್.
ಅಂದಹಾಗೆ ಚಿತ್ರದಲ್ಲಿ ಇಷ್ಟೆಲ್ಲ ಸೆಲ್ಫಿ, ಸೋಷಿಯಲ್ ಮೀಡಿಯಾ ಹುಚ್ಚಿಯಾಗಿ ಕಾಣಿಸಿಕೊಳ್ತಿರೋ ರಚಿತಾ, ರಿಯಲ್ ಲೈಫಲ್ಲಿ ಸೆಲ್ಫಿ, ಸೋಷಿಯಲ್ ಮೀಡಿಯಾದಿಂದ ದೂರ ದೂರ. ಇನ್‍ಸ್ಟಾಗ್ರಾಮ್ ಬಿಟ್ಟರೆ, ಬೇರೆ ಯಾವುದೇ ಪೇಜ್‍ನಲ್ಲಿ ಅವರಿಲ್ಲ. ಇನ್‍ಸ್ಟಾಗ್ರಾಮ್‍ನಲ್ಲಿ ಕೂಡಾ ರೆಗ್ಯುಲರ್ ಆಕ್ಟಿವ್ ಇರಲ್ಲ. ಟ್ವಿಟರ್, ಎಫ್‍ಬಿಯಲ್ಲಿರೋ ರಚಿತಾ ರಾಮ್ ಪೇಜ್‍ಗಳು ಅವರದ್ದಲ್ಲ.