ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್ ಟ್ರಿಪ್‍ನಲ್ಲಿದ್ದಾರೆ. ಈ ಪ್ರಣಯದ ಪಕ್ಷಿಗಳು ತಮ್ಮ ಹನಿಮೂನ್‍ನ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಸುದ್ದಿ ಅದಲ್ಲ, ಈಗ ಅವರನ್ನು ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಹೋಗಿದೆ.
ಮೈಸೂರಿನ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಘಟಕದ ಅಧ್ಯಕ್ಷ ರಫೀಕ್ ಅಲಿ & ಸದಸ್ಯರು ಖುದ್ದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಮೈಸೂರಿನಲ್ಲಿ ಯಾವುದೇ ಕೊರೋನಾ ಕೇಸ್ ಇಲ್ಲ. ಅಂಥಾದ್ದರಲ್ಲಿ ವಿದೇಶದಿಂದ ಬರುತ್ತಿರುವ ಅವರಿಬ್ಬರನ್ನೂ ಕಡ್ಡಾಯವಾಗಿ ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಮನವಿ ಮಾಡಿದ್ದಾರೆ.