ನಂಜನಗೂಡು ನಂಜುಂಡೇಶ್ವರನ ಸನ್ನಿಧಿಯಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳ ಮುಡಿ ಹರಕೆ ತೀರಿಸಿದ್ದಾರೆ. ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮುಡಿ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ `ರಾಯ' ದಂಪತಿ.
ಹರಕೆ ತೀರಿಸಿದ ನಂತರ ಮುದ್ದಾದ ಮಗಳು ಐರಾಳ ಫೋಟೋ ಹಂಚಿಕೊಂಡಿರೋ ಯಶ್ ಅವರಿಗೆ ಮಗಳು ಕೇಳುತ್ತಾಳೆ. ಅಪ್ಪ, ಇದು ಬೇಸಗೆ ಅಂತಾ ಗೊತ್ತು, ಹಾಗಂತ ನನಗೆ ಮಾಡಿಸಿರುವುದು ಬೇಸಗೆ ಕಟ್ ಅಲ್ಲ ತಾನೇ ಎಂದು ಐರಾ ಕೇಳುವ ರೀತಿಯಲ್ಲಿದ್ದರೆ, ಯಶ್ ಉತ್ತರವಿಲ್ಲದೆ ತಡಬಡಾಯಿಸುತ್ತಿರುವ ಫೋಟೋ ಅದು.