ಕೇರಳದಲ್ಲಿ ಕೊರೋನಾ ಎಫೆಕ್ಟಿನಿಂದಾಗಿ ಚಿತ್ರ ಪ್ರದರ್ಶನಗಳನ್ನೇ ಬಂದ್ ಮಾಡಲಾಗಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಸಿನಿಮಾ ಶೋ ರದ್ದು ಮಾಡಬೇಕೇ ಬೇಡವೇ ಎಂಬ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಭೆ ಸೇರಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ, ಚಿತ್ರ ಪ್ರದರ್ಶನ ರದ್ದು ಮಾಡದೇ ಇರಲು ನಿರ್ಧರಿಸಿದೆ.
ಚಿತ್ರ ಪ್ರದರ್ಶನವನ್ನೇ ರದ್ದು ಮಾಡುವಂತಹ ಭೀಕರ ಪರಿಸ್ಥಿತಿ ಇನ್ನೂ ಬಂದಿಲ್ಲ. ಹೀಗಾಗಿ ಚಿತ್ರ ಪ್ರದರ್ಶನ ರದ್ದು ಮಾಡುವ ಯೋಚನೆ ಇಲ್ಲ. ಹಾಗೇನಾದರೂ ಸರ್ಕಾರವೇ ಸೂಚನೆ ನೀಡಿದರೆ ಖಂಡಿತಾ ಪಾಲಿಸುತ್ತೇವೆ ಎಂದಿದ್ದಾರೆ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್.
ಕೊರೋನಾ ಎಫೆಕ್ಟಿನಿಂದಾಗಿ ಚಿತ್ರ ಮಂದಿರಕ್ಕೆ ಬರುವವರ ಸಂಖ್ಯೆ ಶೇ.10ರಷ್ಟು ಕಡಿಮೆಯಾಗಿರಬಹುದೇನೋ.. ಖಚಿತ ಮಾಹಿತಿ ಇಲ್ಲ. ಮಾಲ್ಗಳಲ್ಲಿ ಶೇ.25ರಷ್ಟು ಹೊಡೆತ ಬಿದ್ದಿದೆ. ಟೆಕ್ಕಿಗಳು, ಶ್ರೀಮಂತರು ಹೆದರಿದ್ದಾರೆ, ಅಷ್ಟೆ. ಉಳಿದಂತೆ ಜಿಲ್ಲೆಗಳಲ್ಲಿ ಸಮಸ್ಯೆ ಇಲ್ಲ ಎಂದಿದ್ದಾರೆ ಚಿತ್ರ ಮಂದಿರ ಮಾಲೀಕರೂ ಆದ ಚಂದ್ರಶೇಖರ್.