ಒಂದು ಚಿತ್ರಕ್ಕೆ ಸಾಮಾನ್ಯವಾಗಿ ಎಷ್ಟು ಸಂಗೀತ ನಿರ್ದೇಶಕರಿರುತ್ತಾರೆ. ಕಾಮನ್ ಆಗಿ ಒಬ್ಬರು ಇರುತ್ತಾರೆ. ವಿಶೇಷ ಚಿತ್ರಗಳಲ್ಲಿ ಹಿನ್ನೆಲೆ ಸಂಗಿತಕ್ಕೇ ಒಬ್ಬರಿದ್ದರೆ, ಹಾಡುಗಳಿಗಾಗಿಯೇ ಮತ್ತೊಬ್ಬರಿರುತ್ತಾರೆ. ಅಫ್‍ಕೋರ್ಸ್.. ಕನ್ನಡದಲ್ಲಿ ಏಳೆಂಟು ಸಂಗೀತ ನಿರ್ದೇಶಕರನ್ನು ಒಂದೇ ಚಿತ್ರದಲ್ಲಿ ಬಳಸಿರುವ ದಾಖಲೆಯೂ ಇದೆ. ಆದರೆ, ಈ ನಿಟ್ಟಿನಲ್ಲಿ ಗೋದ್ರಾ ಡಿಫರೆಂಟ್ ಆಗಿ ಹೆಜ್ಜೆಯಿಟ್ಟಿದೆ. ಆ ಚಿತ್ರಕ್ಕೀಗ 4ನೇ ಸಂಗೀತ ನಿರ್ದೇಶಕ ಎಂಟ್ರಿ ಕೊಟ್ಟಿದ್ದಾರೆ.
ಗೋದ್ರಾ ಘೋಷಣೆಯಾದಾಗ ಜೂಡಾ ಸ್ಯಾಂಡಿ ಒಬ್ಬರೇ ಮ್ಯೂಸಿಕ್ ಡೈರೆಕ್ಟರ್ ಅನ್ನೋ ಪ್ಲಾನ್ ಇತ್ತು. ಅದಾದ ಮೇಲೆ ಮಾಸ್ ಹಾಡೊಂದಕ್ಕೆ ನವೀನ್ ಸಜ್ಜು ಕೊಟ್ಟ ಮ್ಯೂಸಿಕ್ ಇಷ್ಟವಾಯ್ತು. ನಂತರ ಟೋನಿ ಜೋಸೆಫ್ ಕೇಳಿಸಿದ ಟ್ಯೂನುಗಳು ಇಷ್ಟವಾದವು. ಅದಾದ ಮೇಲೆ ಚಿತ್ರಕ್ಕೆ ಬ್ಯಾಕ್‍ಗ್ರೌಂಡ್ ಮ್ಯೂಸಿಕ್ ರಾ ಇರಬೇಕು ಎನ್ನಿಸಿತು. ಹೀಗಾಗಿ ಕೆಪಿ (ಕೃಷ್ಣಪ್ರಸಾದ್) ಅವರನ್ನು ಕರೆತರಲಾಯ್ತು ಎಂದಿದ್ದಾರೆ ನಿರ್ದೇಶಕ ನಂದೀಶ್.
ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್ ಅಭಿನಯದ ಚಿತ್ರದ ಶೂಟಿಂಗ್ ಮುಗಿದಿದ್ದು, ರೀ ರೆಕಾರ್ಡಿಂಗ್ ನಡೆಯುತ್ತಿದೆ. ಪ್ಲಾನ್ ಪ್ರಕಾರವೇ ಎಲ್ಲವೂ ನಡೆದರೆ ಮೇ ತಿಂಗಳಲ್ಲಿ ಗೋದ್ರಾ ರಿಲೀಸ್ ಆಗಬಹುದು.