ಕನ್ನಡ ಚಿತ್ರರಂಗದ ಸುಪ್ರೀಂ ಹೀರೋ ಎಂದೇ ಖ್ಯಾತರಾಗಿದ್ದ ಶಶಿಕುಮಾರ್ ಪುತ್ರ ಅಕ್ಷಿತ್, ಮೊಡವೆ ಚಿತ್ರದ ಮೂಲಕ ಎಂಟ್ರಿಗೆ ಸಿದ್ಧತೆ ನಡೆದಿತ್ತು. ಮುಹೂರ್ತವನ್ನೂ ಅದ್ಧೂರಿಯಾಗಿಯೇ ಮಾಡಿಕೊಂಡಿದ್ದ ಸಿನಿಮಾ, ಅದೇಕೋ ಏನೋ ಮುಂದಕ್ಕೆ ಹೋಗಲಿಲ್ಲ. ಈಗ ಅಕ್ಷಿತ್ ಸೀತಾಯಣ ಮೂಲಕ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಚಿತ್ರದ ಶೂಟಿಂಗ್ ಕೂಡಾ ಮುಗಿದಿದೆ.
ವಿಶೇಷವೆಂದರೆ ಈ ಚಿತ್ರದ ಮೂಲಕ ಅಕ್ಷಿತ್, ಕನ್ನಡ ಮತ್ತು ತೆಲುಗು ಎರಡೂ ಕಡೆ ಹೀರೋ ಆಗಿ ಚಿತ್ರರಂಗ ಪ್ರವೇಶ ಮಾಡುತ್ತಿರುವುದು. ಅಕ್ಷಿತ್ ಎದುರು ಅನ್‍ಹಿತ್ ಭೂಷಣ್ ನಾಯಕಿ.
ತೆಲುಗಿನ ಪ್ರಭಾಕರ್ ಆರಿಪಕ್ ನಿರ್ದೇಶನದ ಚಿತ್ರಕ್ಕೆ ರೋಹನ್ ಭಾರದ್ವಾಜ್ ಮತ್ತು ಲಲಿತಾ ರಾಜಲಕ್ಷ್ಮೀ ನಿರ್ಮಾಪಕರು. ವಿಶೇಷ ಅಂದ್ರೆ ಮೊಡವೆ ವೇಳೆ ಆದಿತ್ಯನಾಗಿದ್ದ ಶಶಿ ಕುಮಾರ್ ಪುತ್ರ, ಈಗ ಹೆಸರು ಬದಲಿಸಿಕೊಂಡು ಅಕ್ಷಿತ್ ಆಗಿದ್ದಾರೆ. ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.