ರಚಿತಾ ರಾಮ್ ಅಭಿನಯದ ಏಪ್ರಿಲ್ ಅನ್ನೊ ಚಿತ್ರ ಪೋಸ್ಟರಿನಿಂದಲೇ ವಿಚಿತ್ರ ಕುತೂಹಲ ಮೂಡಿಸಿದ್ದ ಚಿತ್ರ. ನೋಡುಗರ ತಲೆಗೆ ಹುಳ ಬಿಟ್ಟಿದ್ದ ಚಿತ್ರತಂಡ ಶೂಟಿಂಗ್ ಮಾತ್ರ ಶುರು ಮಾಡಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಯುಗಾದಿ ದಿನ ಚಿತ್ರದ ಶೂಟಿಂಗ್ ಶುರುವಾಗಲಿದೆಯಂತೆ.
ಸತ್ಯ ರಾಯಲ ನಿರ್ದೇಶನದ ಚಿತ್ರದ ಕಥೆಯಲ್ಲಿ ಸ್ವಲ್ಪ ಬದಲಾವಣೆ ಆಗಿದೆಯಂತೆ. ಅದಕ್ಕೆ ಕಾರಣ ಚಿರಂಜೀವಿ ಸರ್ಜಾ ಚಿತ್ರತಂಡಕ್ಕೆ ಎಂಟ್ರಿ ಕೊಟ್ಟಿರೋದು.