` ಬಾಲಿವುಡ್ಡಿಗೆ ರಾಧಿಕಾ ಪಂಡಿತ್ ನಟಿಸಿದ್ದ 2 ಚಿತ್ರಗಳು ರೀಮೇಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
love guru and zoom remake in the works
Love Guru, Zoom Movie Image

ಲವ್ ಗುರು, 2009ರಲ್ಲಿ ರಿಲೀಸ್ ಆಗಿ ಹಿಟ್ ಆಗಿದ್ದ ಸಿನಿಮಾ. ಆ ಚಿತ್ರದ ಅಭಿನಯಕ್ಕೆ ರಾಧಿಕಾಗೆ ಫಿಲಂಫೇರ್ ಪ್ರಶಸ್ತಿಯೂ ಸಿಕ್ಕಿತ್ತು.

ಝೂಮ್, 2015ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಒಂದು ಮಜಾ ಲವ್ ಸ್ಟೋರಿ.

ಈಗ ಆ ಎರಡೂ ಚಿತ್ರಗಳು ಹಿಂದಿಗೆ ರೀಮೇಕ್ ಆಗುತ್ತಿವೆ. ಎರಡೂ ಚಿತ್ರಗಳ ಹಿಂದಿ ಡೈರೆಕ್ಟರ್ ಪ್ರಶಾಂತ್ ರಾಜ್. ಯೆಸ್.. ಕನ್ನಡದಲ್ಲಿ ಈ ಎರಡೂ ಚಿತ್ರಗಳನ್ನು ನಿರ್ದೇಶಿಸಿದ್ದ ಅದೇ ಪ್ರಶಾಂತ್ ರಾಜ್, ಹಿಂದಿಯಲ್ಲಿ ಈ ಸಿನಿಮಾ ರೀಮೇಕ್ ಮಾಡುತ್ತಿದ್ದಾರೆ.

ಪ್ರಶಾಂತ್ ರಾಜ್ ಅವರ ಸಾಹಸಕ್ಕೆ ಬಾಲಿವುಡ್ಡಿನ ಫ್ಯಾಂಟಮ್ ಫಿಲಂಸ್ ಮತ್ತು ಟಿಪ್ಸ್ ಸ್ಟುಡಿಯೋ ಕೈ ಜೋಡಿಸಿವೆ. ಲವ್ ಗುರು ಹಿಂದಿ ಚಿತ್ರಕ್ಕೆ ನಾಯಕಿಯಾಗಿ ಕೃತಿ ಕರಬಂಧ ಆಯ್ಕೆಯಾಗಿದ್ದರೆ, ಝೂಮ್ ಹಿಂದಿ ವರ್ಷನ್ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಲಿದ್ದಾರೆ.