` ಇದು ಜಗ್ಗೇಶ್ ಪರಿಮಳ ನಿಲಯ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
this is jaggesh parimala's nilaya
Jaggesh - Parimala Nilaya

ಅಂಧ ಸೋದರಿಯರಿಗೆ ನಿರ್ಮಿಸಿದ ಮನೆ ಅದು. ಸರಿಗಮಪ ರಿಯಾಲಿಟಿ ಶೋನಲ್ಲಿ ಜಗ್ಗೇಶ್ ಆ ಇಬ್ಬರು ಸೋದರಿಯರಿಗೆ ಮನೆ ಕಟ್ಟಿಸಿಕೊಡುವ ಭರವಸೆ ಕೊಟ್ಟಿದ್ದರು. ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಎಂಬ ಇಬ್ಬರು ಅಂಧ ಗಾಯಕಿಯರಿಗೆ ಈಗ ಮನೆ ರೆಡಿ. ಮಾರ್ಚ್ 12ಕ್ಕೆ ಗೃಹ ಪ್ರವೇಶ.

ಆ ಮನೆಗೆ ಇಟ್ಟಿರೋ ಹೆಸರೇ ಇದು, ಜಗ್ಗೇಶ್ ಪರಿಮಳ ನಿಲಯ. ಪುಟ್ಟ ಮನೆಯ ತಾರಸಿಗೆ ಹಳದಿ-ಕೆಂಪು ಬಣ್ಣ ಬಳಿಯಲಾಗಿದೆ. ಗೃಹ ಪ್ರವೇಶಕ್ಕೆ ಜಗ್ಗೇಶ್ ಮತ್ತು ಪರಿಮಳ ಇಬ್ಬರೂ ಹೋಗಿ ಹಾರೈಸಲಿದ್ದಾರೆ.