ರಾಮ್ ರಾಮ್ ರಾಮ್ ಜೈ ಜೈ ಶ್ರೀರಾಮ್ ರಾಮ್ ರಾಮ್ ರಾಮ್.. ಹಾಡು ಕಿವಿಗೆ ಕೇಳುತ್ತಿದ್ದರೆ.. ಪುಟ್ಟ ರಾಮನನ್ನು ಹೆಗಲ ಮೇಲೆ ಹೊತ್ತು ಕುಣಿಯುವ ಹನುಮ. ಅವನೇ ರಾಬರ್ಟ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಮೊದಲ ಬಾರಿಗೆ ಇಂಥಾದ್ದೊಂದು ಪೌರಾಣಿಕ ಅವತಾರದಲ್ಲಿ..ಅದರಲ್ಲೂ ಹನುಮಂತನ ವೇಷದಲ್ಲಿ ಕಂಗೊಳಿಸಿದ್ದಾರೆ.
ರಾಬರ್ಟ್ ಚಿತ್ರದ ಎನರ್ಜೆಟಿಕ್ ಗೀತೆ ಅನ್ನೋ ಸರ್ಟಿಫಿಕೇಟ್ ಕೊಟ್ಟಿರೋದು ನಿರ್ದೇಶಕ ತರುಣ್ ಸುಧೀರ್. ಹೋಳಿ ಹುಣ್ಣಿಮೆಗಾಗಿ ರಿಲೀಸ್ ಆದ ಹಾಡಿಗೆ ದರ್ಶನ್ ಜೊತೆ ಹೆಜ್ಜೆ ಹಾಕಿರುವುದು ವಾನರ ಸೇನೆ. ನಾಗೇಂದ್ರ ಪ್ರಸಾದ್ ಹಾಡಿಗೆ ದಿವ್ಯ ಕುಮಾರ್ ಧ್ವನಿ ಕೊಟ್ಟಿದ್ದಾರೆ. ಉಮಾಪತಿ ನಿರ್ಮಾಣದ ಸಿನಿಮಾ ಏಪ್ರಿಲ್ 9ಕ್ಕೆ ರಿಲೀಸ್ ಆಗಲಿದೆ.