ಸುಮಾರು 14 ವರ್ಷಗಳ ಹಿಂದೆ ತೆರೆ ಕಂಡಿದ್ದ ಸಿನಿಮಾ ಶಿಷ್ಯ. ಆ ಚಿತ್ರ ಹಿಟ್ ಆಗುವುದರೊಂದಿಗೆ ದೀಪಕ್ ವೃತ್ತಿ ಜೀವನ ಬೊಂಬಾಟ್ ಆಗಿಯೇ ಓಪನ್ ಆಯ್ತು. ಆದರೆ.. ಅದಾದ ನಂತರ ಆಗಿದ್ದೇ ಬೇರೆ. ನಟಿಸಿದ್ದು ಬೆರಳೆಣಿಕೆ ಚಿತ್ರಗಳಾದರೂ.. ಕಂಪ್ಲೇಂಟುಗಳು ಮಾತ್ರ ನೂರಾರು.
ದೀಪಕ್ ಕುಡೀತಾರೆ. ಸೆಟ್ಟಿಗೇ ಬರಲ್ಲ. ಟೈಮ್ ಸೆನ್ಸ್ ಇಲ್ಲ. ಒಪ್ಪಿಕೊಂಡ ಕಥೆಯನ್ನು ತಮಗೆ ಇಷ್ಟ ಬಂದಂತೆ ಚೇಂಜ್ ಮಾಡ್ತಾರೆ. ಇಂತಹ ಕಂಪ್ಲೇಂಟುಗಳು ದೀಪಕ್ ವೃತ್ತಿ ಜೀವನಕ್ಕೆ ಕೊಳ್ಳಿಯಿಟ್ಟವು.
ಈಗ ವಿಲನ್ ಅವತಾರದಲ್ಲಿ ಮತ್ತೆ ಬಂದಿದ್ದಾರೆ ದೀಪಕ್. ಜೋಗಿ ಪ್ರೇಮ್ ಅವರ ಏಕ್ ಲವ್ ಯಾ ಚಿತ್ರದಲ್ಲಿ ರೆಬಲ್ ಇನ್ಸ್‍ಪೆಕ್ಟರ್ ಪಾತ್ರದಲ್ಲಿ, ಪ್ರಜ್ವಲ್ ದೇವರಾಜ್ ಅವರ ವೀರಂ ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಕೆಲವು ನಿರ್ದೇಶಕರ ಬಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಕೊಡಿ ಎಂದು ಕೇಳಿದ್ದರಂತೆ ದೀಪಕ್.
ವೃತ್ತಿಪರ ಅಲ್ಲದವರ ಜೊತೆ ಕಮಿಟ್ ಆಗಿ ತಪ್ಪು ಮಾಡಿದೆ. ಅವರು ನನ್ನ ಬಗ್ಗೆ ಲೂಸ್ ಟಾಕ್ ಮಾಡಿದಾಗ
ಉತ್ತರವನ್ನೇ ಕೊಡದೆ ಸುಮ್ಮನಿದ್ದು ಮತ್ತೆ ತಪ್ಪು ಮಾಡಿದೆ. ಇನ್ನು ಮುಂದೆ ಹಾಗಾಗಲ್ಲ ಎನ್ನುವ ದೀಪಕ್ ವೃತ್ತಿ ಜೀವನಕ್ಕೆ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.