ಅಲ್ಲಿದ್ದದ್ದು ದೊಡ್ಡ ದೊಡ್ಡ ಚಿತ್ರಗಳು. ಬ್ರಿಟನ್, ಚೀನಾ, ಕೊರಿಯಾ, ಅರ್ಜೆಂಟಿನಾ, ಸ್ಪೇನ್, ಟರ್ಕಿ ಸೇರಿದಂತೆ ಹಲವು ದೇಶಗಳ ಸಿನಿಮಾಗಳು. ಎಲ್ಲ ಭಾಷೆಗಳ ಸ್ಪರ್ಧೆಯನ್ನೂ ಹಿಂದಿಕ್ಕಿ ಅಲ್ಲಿ ಅಮೃತಮತಿ ಗೆದ್ದಿದ್ದಾಳೆ. ಅಮೃತಮತಿಗೆ ಶ್ರೇಷ್ಟ ನಟಿ ಪ್ರಶಸ್ತಿ ಬಂದಿದೆ. ಅಮೃತಮತಿ ಅರ್ಥಾತ್ ಹರಿಪ್ರಿಯಾ ಈಗ ಫುಲ್ ಹ್ಯಾಪಿ.
ಬರಗೂರು ರಾಮಚಂದ್ರಪ್ಪ ನಿರ್ದೇಶನದ ಚಿತ್ರವಿದು. ಕವಿ ಜನ್ನನ ಯಶೋಧರ ಚರಿತ ಕೃತಿಯನ್ನಾಧರಿಸಿ ನಿರ್ಮಿಸಿರುವ ಚಿತ್ರ ಅಮೃತಮತಿ. ನೋಯ್ಡಾದಲ್ಲಿ ನಡೆದ 4ನೇ ಭಾರತೀಯ ವಿಶ್ವ ಸಿನಿಮಾ ಉತ್ಸವದಲ್ಲಿ ಶ್ರೇಷ್ಟ ನಟಿ ಪ್ರಶಸ್ತಿ ಪಡೆದಿರುವ ಹರಿಪ್ರಿಯಾಗೆ ಇದು ದೊಡ್ಡ ಮನ್ನಣೆ ಎನ್ನುವುದರಲ್ಲಿ ಅನುಮಾನವಿಲ್ಲ. ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್‍ನ ಅಮೃತಮತಿ ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ.