2020ರ ಸೆನ್ಸೇಷನ್ ಆಗಲಿರುವ ಸಿನಿಮಾ ರಾಬರ್ಟ್. ಏಪ್ರಿಲ್ 9ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ರಾಬರ್ಟ್ ಟೀಂ, ಈಗ ಚಿತ್ರದ ಬಹುಮುಖ್ಯ ಹಾಡಿನ ಶೂಟಿಂಗ್‍ಗೆ ಗುಜರಾತ್‍ನತ್ತ ಹೊರಟಿದೆ.
ಹಾಡಿಗಾಗಿ ವಿದೇಶಕ್ಕೆ ಹೋಗಬೇಕಿದ್ದ ರಾಬರ್ಟ್ ಟೀಂ, ಕೊರೋನಾ ವೈರಸ್ ಕಾರಣದಿಂದಾಗಿ ಶೂಟಿಂಗ್ ಕ್ಯಾನ್ಸಲ್ ಮಾಡಿತ್ತು. ಸದ್ಯಕ್ಕೆ ಕೊರೋನಾ ರಿಲ್ಯಾಕ್ಸ್ ನೀಡದ ಹಿನ್ನೆಲೆ ಲೊಕೇಷನ್ ಶಿಫ್ಟ್ ಮಾಡಿದ್ದಾರೆ ನಿರ್ದೇಶಕ ತರುಣ್ ಸುಧೀರ್.
ರಾಬರ್ಟ್ ಚಿತ್ರದ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ಗುಜರಾತ್‍ನ ಕಛ್ ಪ್ರದೇಶದಲ್ಲ ನಡೆಯಲಿದೆಯಂತೆ. ದರ್ಶನ್ ಎದುರು ಆಶಾ ಭಟ್ ನಾಯಕಿ. ಸೋನಲ್ ಮಂಥೆರೋ ಕೂಡಾ ಚಿತ್ರದಲ್ಲಿದ್ದಾರೆ. ರೊಮ್ಯಾಂಟಿಕ್ ಸಾಂಗ್ ಜೋಡಿ ಯಾರು..? ಸಸ್ಪೆನ್ಸ್.. ಸಸ್ಪೆನ್ಸ್..