` ಡೆಡ್ಲಿ ಕೊರೋನಾ ; ಸಿನಿಮಾ ಟೈಟಲ್ ಫಿಕ್ಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
corona title registered in film chamber
KFCC

ಇಡೀ ಜಗತ್ತನ್ನೇ ಕೊರೋನಾ ವೈರಸ್ ತಲ್ಲಣಗೊಳಿಸುತ್ತಿದ್ದರೆ, ಕನ್ನಡದಲ್ಲಿ ಅದೇ ಹೆಸರಿನ ಸಿನಿಮಾವೊಂದು ಸೆಟ್ಟೇರಲು ರೆಡಿಯಾಗಿದೆ. ನಿರ್ಮಾಪಕ ಉಮೇಶ್ ಬಣಕಾರ್ `ಕೊರೋನಾ' ಎಂಬ ಟೈಟಲ್‍ನ್ನು ಫಿಲಂ ಚೇಂಬರ್‍ಗೆ ಸಲ್ಲಿಸಿದ್ದಾರೆ. ಇಲ್ಲಷ್ಟೇ ಎಂದುಕೊಳ್ಳಬೇಡಿ, ಮುಂಬೈ ಫಿಲಂ ಚೇಂಬರ್‍ಗೆ ಡೆಡ್ಲಿ ಕೊರೋನಾ ಎಂಬ ಟೈಟಲ್‍ಗೆ ಮನವಿ ಬಂದಿದೆ.

ಬಿಸಿರಕ್ತ ಖ್ಯಾತಿಯ ಶಿವಕುಮಾರ್, ಈ ಚಿತ್ರದ ನಿರ್ದೇಶಕ ಎಂದು ಮಾಹಿತಿ ನೀಡಿದ್ದಾರೆ ಉಮೇಶ್ ಬಣಕಾರ್. ಅಂದಹಾಗೆ ಎರಡೂ ಕಡೆ ಚಿತ್ರದ ಟೈಟಲ್‍ಗೆ ಅರ್ಜಿ ಹಾಕಿರೋದು ಉಮೇಶ್ ಬಣಕಾರ್ ಅವರೇ. ಇನ್ನು 15 ದಿನಗಳಲ್ಲಿ ಚಿತ್ರದ ತಾಂತ್ರಿಕ ವರ್ಗದ ಆಯ್ಕೆ, ಕಲಾವಿದರ ಆಯ್ಕೆ ಕೆಲಸ ಮುಗಿಯಲಿದ್ದು, ಚಿತ್ರ ಶುರುವಾಗಲಿದೆಯಂತೆ