ರಾಬರ್ಟ್‍ಗೂ ರಾಮನಿಗೂ ಎತ್ತಣೆಂದೆತ್ತಣ ಸಂಬಂಧ ಎನ್ನುವ ಹಾಗೆಯೇ ಇಲ್ಲ. ಏಕೆಂದರೆ ನಾವು ಹೇಳ್ತಿರೋದು ದರ್ಶನ್ ರಾಬರ್ಟ್ ಬಗ್ಗೆ. ಇತ್ತೀಚೆಗಷ್ಟೇ ಬಾ ಬಾ ಬಾ ರೆಡಿ ಆಡಿಯೋ ರಿಲೀಸ್ ಮಾಡಿದ್ದ ರಾಬರ್ಟ್ ಟೀಂ, ಈಗ ಶ್ರೀರಾಮನ ಜಪ ಮಾಡುತ್ತಿದೆ. ಇದೇ ಹೋಳಿ ಹಬ್ಬಕ್ಕೆ ರಾಬರ್ಟ್ ಚಿತ್ರದ ಜೈ ಶ್ರೀರಾಮ್ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ.
ಮಾರ್ಚ್ 9ರಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಜೈ ಶ್ರೀರಾಮ್ ಹಾಡು ರಿಲೀಸ್ ಆಗಲಿದೆ. ನಿರ್ದೇಶಕ ತರುಣ್ ಸುಧೀರ್ ಅವರಂತೂ ಇದು ನನ್ನ ಹೃದಯಕ್ಕೆ ಹತ್ತಿರವಾದ ಗೀತೆ. ಇದನ್ನು ಕೇಳುತ್ತಿದ್ದರೆ ಅಗಾಧ ಶಕ್ತಿ ದೊರೆತಂತೆ ಭಾಸವಾಗುತ್ತೆ ಎಂದಿದ್ದಾರೆ.
ದರ್ಶನ್‍ಗೆ ಹನುಮನ ವೇಷ ಹಾಕಿಸಿದ್ದ ತರುಣ್, ಜೈ ಶ್ರೀರಾಮ್ ಹಾಡನ್ನು ಯಾವ ರೀತಿ ಪ್ರೆಸೆಂಟ್ ಮಾಡಿದ್ದಾರೆ ನೋಡಬೇಕು. ಅರ್ಜುನ್ ಜನ್ಯ ಸಂಗೀತದ ರಾಬರ್ಟ್ ಚಿತ್ರದ ಒಂದು ಹಾಡು ಈಗಾಗಲೇ ಸಂಚಲನ ಸೃಷ್ಟಿಸಿದೆ. ಹೀಗಿರುವಾಗಲೇ ಜೈ ಶ್ರೀರಾಮ್ ಎನ್ನುತ್ತಾ ಹೋಳಿಗೆ ಬರುತ್ತಿದ್ದಾನೆ ರಾಬರ್ಟ್. ಜೈ ಶ್ರೀರಾಮ್.