ಇತ್ತೀಚೆಗೆ ರಿಲೀಸ್ ಆಗಿ ಸುದೀಪ್ ಅಭಿಮಾನಿಗಳ ಜೋಶ್ ಹೆಚ್ಚಿಸಿದ್ದ ಕೋಟಿಗೊಬ್ಬ 3 ಚಿತ್ರದ ಟೀಸರ್ ಯೂಟ್ಯೂಬ್‍ನಿಂದ ನಾಪತ್ತೆಯಾಗಿದೆ. ಅರೆ.. ಏನಿದು.. ಏಕೆ ಹೀಗಾಯ್ತು.. ಎಂದು ಹುಡುಕಿದರೆ ಸಿಗುತ್ತಿರುವ ಉತ್ತರ ಮುಂಬೈನ ವೈಬ್ರೆಂಟ್ ಲಿಮಿಟಿಡ್ ಕಂಪೆನಿ.
ಕೋಟಿಗೊಬ್ಬ 3 ಚಿತ್ರವನ್ನು ಪೋಲೆಂಡ್‍ನಲ್ಲಿ ಶೂಟಿಂಗ್ ಮಾಡಲಾಗಿದೆ. ಅಲ್ಲಿ ಶೂಟ್ ಮಾಡಿದ ದೃಶ್ಯಗಳ ಹಕ್ಕುಗಳು ವೈಬ್ರೆಂಟ್ ಕಂಪೆನಿ ಹೆಸರಲ್ಲಿವೆಯಂತೆ. ನಮಗೆ ಬಾಕಿ ಕೊಟ್ಟಿಲ್ಲ ಎಂದು ತಗಾದೆ ತೆಗೆದಿದ್ದ ಕಂಪೆನಿ, ಈಗ ಟೀಸರ್‍ಗೆ ಬ್ರೇಕ್ ಹಾಕಿಸಿದೆ.
ಇದು ಹಣಕ್ಕಾಗಿ ನಡೆಯುತ್ತಿರುವ ಸಂಚು. ಕಂಪೆನಿಯ ಅಜಯ್ ಪಾಲ್ ನಮಗೇ ಮೋಸ ಮಾಡಿದ್ದಾನೆ. ಆತನ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಕೋಟಿಗೊಬ್ಬ 3 ಟೀಸರ್ ಮತ್ತೆ ಯೂಟ್ಯೂಬ್‍ಗೆ ಬರಲಿದೆ ಎಂದಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು.