ಕಾಣದಂತೆ ಮಾಯವಾಗಿದ್ದವನು ಚಿತ್ರವನ್ನು ಮತ್ತೆ ರಿಲೀಸ್ ಮಾಡಿದ್ದಾರೆ. ಕಳೆದ ತಿಂಗಳು ರಿಲೀಸ್ ಆಗಿ ವಿಭಿನ್ನ ಕಥೆ, ನಿರೂಪಣೆಯಿಂದ ಗಮನ ಸೆಳೆದಿದ್ದ ಕಾಣದಂತೆ ಮಾಯವಾದನು ಸಿನಿಮಾ, ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಚಿತ್ರವನ್ನು ನೋಡಿದ್ದವರೆಲ್ಲ ಸಿನಿಮಾ ಚೆನ್ನಾಗಿದೆ ಎಂದು ಹೊಗಳಿದ್ದರು. ಆದರೆ.. 2 ವಾರ ಕಳೆದರೂ ಚಿತ್ರಕ್ಕೆ ಕಾಡಿದ್ದು ಪ್ರೇಕ್ಷಕರ ಕೊರತೆ. ಹೀಗಾಗಿ ಎತ್ತಂಗಡಿಯಾಗಿದ್ದ ಸಿನಿಮಾವನ್ನು ಮತ್ತೆ ರಿಲೀಸ್ ಮಾಡಿದೆ ಚಿತ್ರತಂಡ.
ರಾಕ್‍ಲೈನ್ ಮಾಲ್ ಮತ್ತು ಕಾಮಾಕ್ಯ ಥಿಯೇಟರುಗಳಲ್ಲಿ ಸಿನಿಮಾವನ್ನು ಮತ್ತೆ ರಿಲೀಸ್ ಮಾಡಿ, ಪ್ರೇಕ್ಷಕರು ಬಂದು ನೋಡಿ ಹರಸಬೇಕು ಎಂದು ಕೇಳಿಕೊಂಡಿದ್ದಾರೆ ನಟ ವಿಕಾಸ್.
ಜಯಮ್ಮನ ಮಗ ಎಂಬ ಹಿಟ್ ಚಿತ್ರ ಕೊಟ್ಟಿದ್ದ ನಿರ್ದೇಶಕ ವಿಕಾಸ್, ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಸಿಂಧು ಲೋಕನಾಥ್ ನಾಯಕಿ. ರಾಜ್ ಪತ್ತಿಪಾಟಿ ನಿರ್ದೇಶನದ ಸಿನಿಮಾಗೆ ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್ ಮತ್ತು ಪುಷ್ಪಾ ಸೋಮ್ ಸಿಂಗ್ ನಿರ್ಮಾಪಕರು. ಬುಕ್ ಮೈ ಶೋ ವಿರುದ್ಧವೂ ಆಕ್ರೋಶ ಹೊರಹಾಕಿರುವ ಚಿತ್ರತಂಡ, ಚಿತ್ರಕ್ಕೆ ಕಡಿಮೆ ರೇಟಿಂಗ್ ಕೊಟ್ಟು ಚಿತ್ರವನ್ನು ಹಾಳು ಮಾಡಿತು ಎಂದು ದೂರಿದ್ದಾರೆ.
ಒಂದೊಳ್ಳೆಯ ಸಿನಿಮಾ ಮತ್ತೆ ರಿಲೀಸ್ ಆಗಿದೆ. ಗೆಲ್ಲಲಿ.