` ಅನು ಪ್ರಭಾಕರ್'ಗೆ ಬಂತು ಮುಂದಿನ ಜನ್ಮದ ಮದುವೆ ಪ್ರಪೋಸಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
anu prabhakar receives marriage proposal by a fan
Anu Prabhakar Image

ಹೃದಯಾ ಹೃದಯಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನು ಪ್ರಭಾಕರ್ ಈಗಲೂ ಅಷ್ಟೇ ಚೆಂದವಿದ್ದಾರೆ. ಅವರೀಗ ಅನು ಮುಖರ್ಜಿ. ಮುದ್ದಾದ ಮಗುವೂ ಇದೆ. ಸ್ಸೋ.. ಈ ಜನ್ಮದ ಮದುವೆ ಕೋಟಾ ಮುಗಿದಿದೆ. ಹೀಗಿರೋವಾಗ ಅವರಿಗೆ.. ಮುಂದಿನ ಜನ್ಮದ ಮದುವೆ ಪ್ರಪೋಸಲ್ ಬಂದಿದೆ.

ನವೀನ್ ರಾಜ್ ಎಂಬ ಅಭಿಮಾನಿ ಅನು ನಿಮ್ಮನ್ನು ನೋಡ್ತಾ ಇದ್ರೆ, ನನ್ನ ಹಳೇ 1999 ಲವ್ ಸ್ಟೋರಿ ಮತ್ತೆ ಓಪನ್ ಆಗುತ್ತೆ. ಮುಂದಿನ ಜನ್ಮದಲ್ಲಿ ನೀವೇ ನನ್ನ ಬಾಳ ಸಂಗಾತಿಯಾಗಬೇಕು ಅಂತ ನನ್ನ ಆಸೆ, ನೀವೇನಂತೀರಾ ಎಂದಿದ್ದಾರೆ.

ಮೊದಲು ಈ ಲೈಫಲ್ಲಿ ಹ್ಯಾಪಿಯಾಗಿರಿ. ಮುಂದಿನ ಜನ್ಮ ಆಮೇಲೆ ನೋಡೋಣ ಎಂದು ನಗುತ್ತಲೇ ಉತ್ತರ ಕೊಟ್ಟಿದ್ದಾರೆ ಅನು ಪ್ರಭಾಕರ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery