ಈ ಬಜೆಟ್‍ನಲ್ಲಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ 500 ಕೋಟಿ ಘೋಷಿಸಿರುವುದನ್ನು ಚಿತ್ರರಂಗದ ಅನೇಕರು ಸ್ವಾಗತಿಸಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಸ್ಥಳ ಗುರುತಿಸುವ ಕೆಲಸವಾಗಲಿ ಎಂದಿದೆ. ಬೆಂಗಳೂರಿಗಿಂತ ಮೈಸೂರಿನಲ್ಲಾಗಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ನಟ ಯಶ್ ಅವರ ವಾದ.
ಚಿತ್ರನಗರಿ ಅನ್ನೋ ಕನಸಿಗೆ ದೊಡ್ಡ ರೂಪ ಕೊಟ್ಟ ರವಿಚಂದ್ರನ್ ರಿಯಾಕ್ಷನ್ ಏನಿರಬಹುದು..?
ಪ್ರಾರಂಭ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ರವಿಚಂದ್ರನ್, ಏನಾದರೂ ಆಗಲಿ, ಮೊದಲು ಕೆಲಸ ಶುರುವಾಗಲಿ. ಅದು ಚಲನಚಿತ್ರ ವಾಣಿಜ್ಯ ಮಂಡಳಿ ಉಸ್ತುವಾರಿಯಲ್ಲೇ ಆಗಲಿ. ಕಿತ್ತಾಡದಿದ್ದರೆ ಅಷ್ಟೇ ಸಾಕು ಎಂದಿದ್ದಾರೆ.